newsics.com
ಬೆಂಗಳೂರು: ಪೊಲೀಸರಿಗೆ ಸಿಗದೆ ತಪ್ಪಿಸುತ್ತಿದ್ದ ಆರೋಪಿ ನಾಗೇಶನನ್ನು ಕೊನೆಗೂ ಬಂಧಿಸಲಾಗಿದೆ. ಆರೋಪಿಯನ್ನು ಹಿಡಿದ ಪೊಲೀಸರಿಗೆ 5 ಲಕ್ಷ ಬಹುಮಾನವನ್ನು ನೀಡುವುದಾಗಿ ಕಮಲ್ ಪಂತ್ ಹೇಳಿದ್ದಾರೆ.
ಆರೋಪಿಯನ್ನು ಬಂಧಿಸಲು 15 ದಿನಗಳಿಂದ ಸುಮಾರು ನೂರಕ್ಕೂ ಹೆಚ್ಚು ಪೊಲೀಸರು ಕಾರ್ಯಾಚರಣೆಯಲ್ಲಿ ತೊಡಗಿದ್ದು, ಅಂತೆಯೇ ಪೊಲೀಸ್ ಅಧಿಕಾರಿಗಳು ಹಲವೆಡೆ ಓಡಾಡುವ ಮೂಲಕ ಮತ್ತು ತನಿಖೆಯನ್ನು ಸಂಪೂರ್ಣ ಮುತುವರ್ಜಿವಹಿಸಿ ಸತತವಾಗಿ ಕೆಲಸವನ್ನು ಮಾಡುತ್ತಿದ್ದರು. ಅವರ ಪರಿಶ್ರಮಕ್ಕೆ 5 ಲಕ್ಷ ರೂಪಾಯಿಯನ್ನು ಕಮಲ್ ಪಂತ್ ಅವರು ಅಭಿನಂದನೆಯ ರೂಪದಲ್ಲಿ ನೀಡಲು ನಿರ್ಧರಿಸಿದ್ದಾರೆ.