ಕಲಬುರಗಿ: ಮೈಸೂರು-ಬೆಂಗಳೂರು-ಕಲಬುರಗಿ ನಡುವೆ ನಿತ್ಯ ಸಂಚರಿಸುವ ಅಲಯನ್ಸ್ ಏರ್ಸ್ ವಿಮಾನ ಇಂದು ಹಾರಾಟ ಆರಂಭಿಸಿತು.
ಬೆಂಗಳೂರಿನಿಂದ ಬೆಳಗ್ಗೆ 10.50 ಗಂಟೆಗೆ ಹೊರಡಲಿರುವ ಅಲಯನ್ಸ್ ವಿಮಾನ ಕಲಬುರಗಿಗೆ 11.25 ಕ್ಕೆ ಆಗಮಿಸಲಿದೆ. ಕಲಬುರಗಿಯಿಂದ 11.50 ಕ್ಕೆ ಹೊರಟು ಮಧ್ಯಾಹ್ನ 1.30ಕ್ಕೆ ಬೆಂಗಳೂರು ತಲುಪಲಿದೆ. ಅದೇ ವಿಮಾನ ಮೈಸೂರಿಗೆ ಪ್ರಯಾಣ ಮುಂದುವರಿಸಲಿದೆ.
ಈ ವೇಳೆ ಮಾತನಾಡಿದ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ, ಶೀಘ್ರವೇ ಕಲಬುರಗಿ ಮತ್ತು ದೆಹಲಿಯ ನಡುವೆ ವಿಮಾನ ಹಾರಾಟ ಆರಂಭವಾಗಲಿದೆ ಎಂದರು.
ಕಲಬುರಗಿ-ತಿರುಪತಿ ನಡುವೆಯೂ ಶೀಘ್ರ ವಿಮಾನ ಸೇವೆ ಆರಂಭಗೊಳ್ಳಲಿದೆ ಎಂದು ವಿಮಾನಯಾನ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದರು. ಹಜ್ ಯಾತ್ರೆ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ವಿಶೇಷ ವಿಮಾನಗಳ ಹಾರಾಟಕ್ಕೂ ವ್ಯವಸ್ಥೆ ಕಲ್ಪಿಸುವ ಚಿಂತನೆ ನಡೆದಿದೆ.
ಕಲಬುರಗಿಯ ಸೇಡಂ ರಸ್ತೆಯ ಶ್ರೀನಿವಾಸ ಸರಡಗಿ ಬಳಿ 181 ಕೋಟಿ ರೂ. ವೆಚ್ಚದಲ್ಲಿ 742 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ವಿಮಾನ ನಿಲ್ದಾಣ ರಾಜ್ಯದ ಎರಡೆಯ ಅತಿದೊಡ್ಡ ರನ್ ವೇ ಹೊಂದಿದ ನಿಲ್ದಾಣ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಕಲಬುರಗಿಯಿಂದ ಮೈಸೂರಿಗೆ ವಿಮಾನ ಸಂಚಾರ ಆರಂಭ
Follow Us