newsics.com
ಕಲಬುರಗಿ: ಮಳೆ ಅಬ್ಬರಕ್ಕೆ ಉತ್ತರ ಕರ್ನಾಟಕದ ಬಹುಪಾಲು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಪ್ರವಾಹಕ್ಕೆ ಸಿಲುಕಿ ಮರವೇರಿದ್ದ ಯಾದಗಿರಿ ತಹಸೀಲ್ದಾರ್ ಅವರನ್ನು ರಕ್ಷಿಸಲಾಗಿದೆ.
ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಗಣಾಪುರ ಗ್ರಾಮದ ಸೇತುವೆ ಬಳಿ ಸಿಲುಕಿದ್ದ ಯಾದಗಿರಿ ತಹಸೀಲ್ದಾರ್ ಪಂಡಿತ್ ಬಿರಾದಾರ್ ಅವರನ್ನು ರಕ್ಷಣೆ ಮಾಡಲಾಗಿದೆ ಎಂದು ಕಲಬುರಗಿ ಜಿಲ್ಲಾಡಳಿತ ತಿಳಿಸಿದೆ.
ಬುಧವಾರ ಯಾದಗಿರಿಯಿಂದ ಬೀದರ್’ಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯಾದಗಿರಿ ತಹಸೀಲ್ದಾರ್ ಪಂಡಿತ್ ಬಿರಾದಾರ್ ಅವರು ಪ್ರವಾಹವಿದ್ದ ಸೇತುವೆಯನ್ನು ದಾಟಿದ್ದಾರೆ. ಈ ವೇಳೆ ಕಾರು ಪ್ರವಾಹದಲ್ಲಿ ಸಿಲುಕಿದ್ದು, ತಕ್ಷಣ ಕಾರಿನಿಂದ ಇಳಿದ ತಹಸೀಲ್ದಾರ್ ಅಲ್ಲೇ ಇದ್ದ ಮರವೊಂದನ್ನು ಏರಿ ಕುಳಿತಿದ್ದಾರೆ.
ಮಾಹಿತಿ ತಿಳಿದ ಕಲಬುರಗಿ ತಹಸೀಲ್ದಾರ್ ಅರುಣ್ ಕುಮಾರ್ ಕುಲಕರ್ಣಿ, ಡಿವೈಎಸ್ಪಿ ವೀರಭದ್ರಯ್ಯ, ಸಿಪಿಐ ಮಹಾಂತೇಶ ಪಾಟೀಲ್, ಪಿಎಸ್‌ಐ ಸಂತೋಷ್ ರಾಥೋಡ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ತಹಸೀಲ್ದಾರ್ ಪಂಡಿತ್ ಬಿರಾದಾರ್ ಆವರನ್ನು ರಕ್ಷಿಸಿದ್ದಾರೆ.
ಕಾರಿನ ಟೈರ್ ಬ್ಲಾಸ್ಟ್; ತಾಯಿ, ಮಗ ಸೇರಿ ಮೂವರ ಸಾವು