Saturday, November 26, 2022

‘ಜಾನಪದ ಅಜ್ಜಿ’ ಹನುಮಿ ಕ್ಷೇತ್ರಗೌಡ ನಿಧನ

Follow Us

newsics.com

ಹೊನ್ನಾವರ(ಉತ್ತರ ಕನ್ನಡ): ‘ಜಾನಪದ ಹಾಡುಗಳ ಕಣಜ’ದಂತಿದ್ದ ಜಾನಪದಶ್ರೀ ಪ್ರಶಸ್ತಿ ಪುರಸ್ಕೃತ ಹನುಮಿ‌ ಕ್ಷೇತ್ರಗೌಡ (74) ನಿಧನರಾದರು.
ಕಳೆದ ಕೆಲ ದಿನಗಳಿಂದ ವಯೋಸಹಜ‌ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಸೋಮವಾರ ಹೊನ್ನಾವರ ತಾಲೂಕಿನ ಮಾಳಕೋಡಿನಲ್ಲಿ ಕೊನೆಯುಸಿರೆಳೆದರು. ಅವರಿಗೆ ಓರ್ವ ಪುತ್ರಿ, ಐವರು ಪುತ್ರರಿದ್ದಾರೆ.

ನಾಲ್ಕನೇ ತರಗತಿವರೆಗೆ ಓದಿದ್ದ ಹನುಮಿ‌ ಕ್ಷೇತ್ರಗೌಡ, 40 ಜನರ ಅವಿಭಕ್ತ ಕುಟುಂಬದ ಎಲ್ಲಾ ಸಂಸಾರ ತಾಪತ್ರಯಗಳನ್ನು ನಿಭಾಯಿಸಿಕೊಂಡೇ ಸಾವಿರಕ್ಕೂ ಹೆಚ್ಚು ಜಾನಪದ ಹಾಡುಗಳನ್ನು ಕಂಠಸ್ಥವಾಗಿಸಿಕೊಂಡಿದ್ದಲ್ಲದೆ, ಹಾಡುಗಳ ಪ್ರಸಾರಕ್ಕೂ ಕಾರಣರಾಗಿದ್ದರು.

ಹೊನ್ನಾವರ ತಾಲೂಕಿನ ಅಳ್ಳಂಕಿಯ ಯುರ್ಜಿನಮೂಲೆಯಲ್ಲಿ ಜನಿಸಿದ್ದ ಅವರು ಶರಾವತಿ ನಡುಗಡ್ಡೆ ಹೈಗುಂದದಲ್ಲಿ. ಮಾಳಕೋಡಿನ ಪತಿಯ ಊರಿನಲ್ಲಿ ಜೀವನ ಸಾಗಿಸುತ್ತಿದ್ದರು. ಕೇದಗೆಯ ಎಲೆಯಲ್ಲಿ ಚಾಪೆ ನೇಯುವ ಹಾಗೂ ಶೇಡಿ ಕಲೆಯಲ್ಲಿ ನಿಷ್ಣಾತರಾಗಿದ್ದರು.
2002ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಜ್ಞಾನ ವಿಜ್ಞಾನ ಪ್ರಶಸ್ತಿ, ಕರ್ನಾಟಕ ಸರ್ಕಾರದ ಜಾನಪದಶ್ರೀ ಮೊದಲಾದ ಪುರಸ್ಕಾರಗಳಿಗೆ ಹನುಮಜ್ಜಿ ಭಾಜನರಾಗಿದ್ದರು.

ಮಕ್ಕಳಲ್ಲಿ‌ ಹೆಚ್ಚಿದ ಕೊರೋನಾ: ಒಂದೇ ತಿಂಗಳಲ್ಲಿ ರಾಜ್ಯದ 50 ಸಾವಿರ ಮಕ್ಕಳಿಗೆ ಸೋಂಕು

ಟಿಆರ್’ಪಿ ಹಗರಣ: 2ನೇ ಆರೋಪ ಪಟ್ಟಿಯಲ್ಲಿ ಅರ್ನಬ್ ಗೋಸ್ವಾಮಿ ಹೆಸರು

ಮತ್ತಷ್ಟು ಸುದ್ದಿಗಳು

vertical

Latest News

ಚರ್ಮ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ: ನಗ್ನರಾಗಿ ಪೋಸ್ ನೀಡಿದ 2500 ಮಂದಿ

newsics.com ಸಿಡ್ನಿ: ಹೆಚ್ಚುತ್ತಿರುವ ಚರ್ಮ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಫೋಟೋ ಶೂಟ್ ಗೆ 2500 ಮಂದಿ ನಗ್ನರಾಗಿ ಪೋಸ್ ನೀಡಿದ್ದಾರೆ. ಸಿಡ್ನಿಯ ಬೋಂಡಿ...

ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ದುರಂತ: ನಾಲ್ವರು ಯುವತಿಯರ ಸಾವು

newsics.com ಬೆಳಗಾವಿ: ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿ ಇರುವ ಕಿತವಾಡ ಜಲಪಾತದ ಬಳಿ ಭಾರೀ ದುರಂತ ಸಂಭವಿಸಿದೆ. ಸೆಲ್ಫಿ ತೆಗೆಯುವ ವೇಳೆ ನಾಲ್ವರು ಯುವತಿಯರು ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಓರ್ವ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ....

ಪೊಲೀಸರಿಂದ ಶಂಕಿತ ಭಯೋತ್ಪಾದಕ ಶಾರೀಕ್ ಗೆಳತಿಯ ವಿಚಾರಣೆ

newsics.com ಬೆಂಗಳೂರು: ಶಂಕಿತ ಭಯೋತ್ಪಾದಕ ಶಾರೀಕ್ ನ ಮೊಬೈಲ್ ನಲ್ಲಿ ಸ್ಫೋಟಕ ಮಾಹಿತಿ ದೊರೆತಿದೆ. ಶಾರೀಕ್  ಬೆಂಗಳೂರಿನಲ್ಲಿ ಗರ್ಲ್ ಫ್ರೆಂಡ್ ಜತೆ ಸುತ್ತಾಡುತ್ತಿದ್ದ ಎಂಬ ಅಂಶ ಬಯಲಾಗಿದೆ. ಶಾಪಿಂಗ್ ಹೆಸರಿನಲ್ಲಿ ಯುವತಿಯನ್ನು ಹೊರಗಡೆ ಕರೆದುಕೊಂಡು ಹೋಗುತ್ತಿದ್ದ...
- Advertisement -
error: Content is protected !!