newsics.com
ಬೆಂಗಳೂರು: ರಸ್ತೆ ಹಾಳಾಗಿದ್ದರೆ, ಫುಟ್’ಪಾತ್ ಹಾಳಾಗಿದ್ದರೇ ಬಿಬಿಎಂಪಿಗೆ ಶಾಪ ಹಾಕ್ಕೊಂಡು ಓಡಾಡೋರೆ ಜಾಸ್ತಿ. ಆದರೆ ಈ ನಟಿ ಮಾತ್ರ ಹದಗೆಟ್ಟ ರಸ್ತೆ, ಫುಟ್’ಪಾತ್ ನೋಡಿದವರೇ ಗುದ್ದಲಿ ಹಿಡಿದು ಕೆಲಸಕ್ಕೆ ನಿಂತು ನೆಟ್ಟಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬೆಂಗಳೂರಿನ ಜಯನಗರ ನಾಲ್ಕನೇ ಹಂತದ ಬಳಿಯ ಬಸ್ ನಿಲ್ದಾಣ ಪಕ್ಕದಲ್ಲಿ ರಸ್ತೆ ಕಿತ್ತುಹೋಗಿದೆ. ಎಲ್ಲರೂ ಇದನ್ನು ನೋಡಿ ಸುಮ್ಮನೆ ಹೋಗಿದ್ದಾರೆ.
ಆದರೆ ಇದನ್ನು ಗಮನಿಸಿದ ನಟಿ ಸಂಯುಕ್ತಾ ಹೊರನಾಡ್ ತಮ್ಮ ಸ್ನೇಹಿತರ ಜತೆ ಸೇರಿ ರಸ್ತೆ ಹಾಗೂ ಪಾದಚಾರಿ ಓಡಾಟದ ರಸ್ತೆಯನ್ನು ಸರಿಪಡಿಸಿದ್ದಾರೆ. ವಿಶೇಷ ಅಂದ್ರೆ, ನಟಿ ಸಂಯುಕ್ತಾ ಹೊರನಾಡ್ ಈ ಕಾರ್ಯಕ್ಕೆ ನಟ ಪ್ರಕಾಶ್ ಬೆಳವಾಡಿ ಕೂಡ ಸಾಥ್ ನೀಡಿದ್ದಾರೆ.
ಈ ವಿಡಿಯೋ ಹಾಗೂ ಪೋಟೋಗಳನ್ನು ನಟಿ ಸಂಯುಕ್ತಾ ಹೊರನಾಡ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಈ ರೀತಿಯ ಅವ್ಯವಸ್ಥೆ ಎಲ್ಲಾದರೂ ಇದ್ದರೆ ನಮ್ಮ ಗಮನಕ್ಕೆ ತನ್ನಿ ಎಂದು ಮನವಿ ಮಾಡಿದ್ದಾರೆ.
ಬೆಂಗಳೂರಿನಾದ್ಯಂತ ಇದೇ ರೀತಿ ರಸ್ತೆ ಗುಂಡಿಗಳಾಗಿದ್ದು ಬಿಬಿಎಂಪಿ ದುರಸ್ತಿಗೆ ಮುಂದಾಗಿಲ್ಲ. ಆದರೆ ನಟಿ ಸಂಯುಕ್ತಾ ಈ ಮಾದರಿ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
In and around 4th block most pavements r under repair & on contract with bbmp vendors. Most places there are heaps of debris creating ugly spots…
— Samyukta Hornad (@samyuktahornad) September 12, 2020
This spot opposite Jayanagar bus stand, a part built pavement has stone waste spread over, we cleared it this morning #SpotFixing pic.twitter.com/hb0uoDKFbQ
ಬೋಸ್ಟನ್ ಚಿತ್ರೋತ್ಸವಕ್ಕೆ ಕನ್ನಡದ ಅಮೃತಮತಿ ಆಯ್ಕೆ