Friday, October 30, 2020

ರಾಯಚೂರಿನಲ್ಲಿ ರಾಜ್ಯದ 29ನೇ ವಿವಿ ಅಸ್ತಿತ್ವಕ್ಕೆ

ಬೆಂಗಳೂರು: ರಾಜ್ಯದ 29ನೇ ವಿಶ್ವವಿದ್ಯಾಲಯ ರಾಯಚೂರಿನಲ್ಲಿ ಶೀಘ್ರ ತಲೆಯೆತ್ತಲಿದೆ.
ಹೊಸ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ರಾಜ್ಯಪಾಲ ವಜುಭಾಯ್ ವಾಲಾ ಅಂಕಿತ ಹಾಕಿದ್ದು, ನೂತನವಾಗಿ ರಾಯಚೂರು ವಿಶ್ವವಿದ್ಯಾಲಯ ಇದೀಗ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿದೆ.
ಗುಲ್ಬರ್ಗ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿದ್ದ ಯಾದಗಿರಿ ಮತ್ತು ರಾಯಚೂರು ಒಟ್ಟಿಗೆ ಸೇರಿಸಿ ಹೊಸ ವಿಶ್ವವಿದ್ಯಾಲಯ ಅಸ್ತಿತ್ವದ 2020ರ ನಿಯಮದ ಅಡಿ ಹೊಸ ವಿವಿ ರಚನೆ ಪ್ರಸ್ತಾಪಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿತ್ತು. ನೂತನ ವಿಶ್ವವಿದ್ಯಾಲಯ ಅಸ್ತಿತ್ವದ ಕಡತವನ್ನು ರಾಜ್ಯಪಾಲರ ಅಂಕಿತಕ್ಕೆ ರಾಜ್ಯ ಸರ್ಕಾರ ಕಳುಹಿಸಿಕೊಡಲಾಗಿತ್ತು.
ಇದೀಗ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಬೇರ್ಪಡಿಸಿದ ಯಾದಗಿರಿ ಮತ್ತು ರಾಯಚೂರು ಜಿಲ್ಲೆಯನ್ನು ಒಟ್ಟುಗೂಡಿಸಿದ ರಾಯಚೂರು ನೂತನ ವಿಶ್ವವಿದ್ಯಾಲಯ ಕಡತಕ್ಕೆ ರಾಜ್ಯಪಾಲರು ಅಧಿಕೃತವಾಗಿ ಅಂಕಿತ ಹಾಕಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಕೊಲ್ಕತ್ತಾ ವಿರುದ್ಧ ಗೆದ್ದ ಚೆನ್ನೈ

newsics.comದುಬೈ: ಗುರುವಾರ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದಲ್ಲಿ ಚೆನ್ನೈ 6 ವಿಕೆಟ್ ಗಳ ಗೆಲುವು ಸಾಧಿಸಿದೆ.ಜಡೇಜ...

ದೆಹಲಿಯಲ್ಲಿ ಚಳಿ ಚಳಿ… 26 ವರ್ಷಗಳಲ್ಲೆ ಅತಿ ಹೆಚ್ಚು!

newsics.comನವದೆಹಲಿ: ದೆಹಲಿಯಲ್ಲಿ ಗುರುವಾರ (ಅ.29) ಕನಿಷ್ಠ ತಾಪಮಾನ 12.5 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದ್ದು, 26 ವರ್ಷಗಳಲ್ಲಿ ಅಕ್ಟೋಬರ್‌ ತಿಂಗಳಲ್ಲಿ ದಾಖಲಾದ ಅತಿ ಕನಿಷ್ಠ ತಾಪಮಾನ ಇದಾಗಿದೆ ಎಂದು ಭಾರತೀಯ ಹವಾಮಾನ...

ಚರ್ಚ್‌ನಲ್ಲೆ ಮಹಿಳೆಯ ತಲೆ ಕಡಿದ, ಇನ್ನಿಬ್ಬರನ್ನು ಇರಿದು ಕೊಂದ ಶಂಕಿತ ಉಗ್ರ

newsics.comನೀಸ್ (ಫ್ರಾನ್ಸ್): ಇಲ್ಲಿನ ಚರ್ಚೊಂದರಲ್ಲಿ ಇಂದು (ಅ.29) ದುಷ್ಕರ್ಮಿಯೊಬ್ಬ ಮಹಿಳೆಯ ತಲೆ ಕಡಿದಿದ್ದಾನೆ. ಇತರ ಇಬ್ಬರನ್ನು ಇರಿದು ಕೊಂದಿದ್ದಾನೆ ಎಂದು ನೀಸ್ ಪೊಲೀಸರು ತಿಳಿಸಿದ್ದಾರೆ.ಇದು ಉಗ್ರರ ಕೃತ್ಯ ಎಂದು ನೀಸ್...
- Advertisement -
- Advertisement -
error: Content is protected !!