newsics.com
ಬಾಗಲಕೋಟೆ: ನಾರಾಯಣಪುರ ಡ್ಯಾಂನ ಹಿನ್ನೀರು ಪ್ರದೇಶದಲ್ಲಿ ನಾಲ್ವರು ಅಸುನೀಗಿದ್ದಾರೆ. ಎಂಟು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಧನ್ನೂರು ಬಳಿ ಈ ದುರಂತ ಸಂಭವಿಸಿದೆ. ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಹರನಾಳದ ಮಾನಸಿಕ ಅಸ್ವಸ್ಥ ಶಿವಪ್ಪ ಅಮಲೂರು(70) ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ. ಶಿವಪ್ಪ ಮೃತದೇಹ ಶೋಧಕ್ಕಾಗಿ ಬೋಟ್ ನಲ್ಲಿ ತೆರಳಿದ್ದಾಗ ವಿದ್ಯುತ್ ಸ್ಪರ್ಶದಿಂದ ಮೂವರು ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಶಿವಪ್ಪನ ಮಗ ಯಮನಪ್ಪ ಅಮಲೂರು(45), ಮಾವ ಶರಣಗೌಡ ಬಿರಾದಾರ(30), ಬೋಟ್ ಚಾಲಕ ಪರಶು ಮೃತಪಟ್ಟವರು.