newsics.com
ಕೊಪ್ಪಳ: ರಾಜ್ಯದ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಫ್ರಾನ್ಸ್ ನ ಭಾರತ ರಾಯಭಾರಿ ಎಮ್ಯೂನಿಯಲ್ ಲೆನಿನ್ ಪತ್ನಿ ಸಮೇತ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿರುವ ಹನುಮಂತ ದೇವಸ್ಥಾನ ರಾಜ್ಯದ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾಗಿದೆ.
ಆಂಜನೇಯನ ಸನ್ನಿಧಿಯಲ್ಲಿ ಫ್ರಾನ್ಸ್ ರಾಯಭಾರಿ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಸಂಪ್ರದಾಯಕ್ಕೆ ಅನುಗುಣವಾಗಿ ರಾಯಭಾರಿ ಮತ್ತು ಅವರ ಪತ್ನಿಯನ್ನು ಗೌರವಿಸಲಾಯಿತು.
ಬಳಿಕ ಬೆಟ್ಟದ ಮೇಲೆ ನಿಂತು ಫ್ರಾನ್ಸ್ ರಾಯಭಾರಿ ಮತ್ತು ಅವರ ಪತ್ನಿ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿ ಕೊಂಡರು.