ಮೈಸೂರು: ನಗರದ ಮಾನಸಗಂಗೋತ್ರಿ ಆವರಣದಲ್ಲಿ ಜೆಎನ್ ಯುನಲ್ಲಿ ನಡೆದ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಪ್ರಕರಣ ಖಂಡಿಸಿ ನಡೆಸುತ್ತಿದ್ದ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ್ ಫಲಕ ಹಿಡಿದಿದ್ದ ಯುವತಿ ನಳಿನಿ ಪರ ವಕಾಲತ್ತು ವಹಿಸದಿರಲು ಮೈಸೂರು ವಕೀಲರ ಸಂಘ ನಿರ್ಧರಿಸಿದೆ.
ಮೈಸೂರು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿನಿ ನಳಿನಿ ಪರವಾಗಿ ವಕೀಲರ ಸಂಘದ ಯುವ ವಕೀಲ ಕಿರಣ್ ಅವರು ಮಧ್ಯಂತರ ಜಾಮೀನಿಗೆ ವಕಾಲತ್ತು ವಹಿಸಿದ್ದರು. ಆದರೆ ಈಗ ಅವರೂ ಹಿಂದೆ ಸರಿದಿದ್ದಾರೆ.
ಮೈಸೂರಿನ ವಾತಾವರಣವನ್ನು ಬದಲಿಸಲು ಯತ್ನಿಸಿರುವ ಶಕ್ತಿಗಳಿಗೆ ವಕಾಲತ್ತು ವಹಿಸಬಾರದು ಎಂದು ಎಲ್ಲ ಸದಸ್ಯರಿಗೂ ಅಧ್ಯಕ್ಷರು ತಿಳಿಸಬೇಕೆಂದು ವಕೀಲರ ಸಂಘದ ಸದಸ್ಯರ ನಿಯೋಗ ಮನವಿ ಮಾಡಿದೆ.
ಫ್ರೀ ಕಾಶ್ಮೀರ್ ಫಲಕ ವಿವಾದ; ನಳಿನಿ ಪರ ವಕಾಲತ್ತಿಲ್ಲ
Follow Us