newsics.com
ಬೆಂಗಳೂರು: ನಗರದ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಾಜೇಶ್ ಮಿಶ್ರಾ ಎಂಬವರು ವಿಡಿಯೋ ಕಾಲ್ ನಲ್ಲಿ ಪತ್ನಿ ಜತೆ ಮಾತನಾಡುತ್ತಿದ್ದರು. ಈ ವೇಳೆ ಹತ್ತಿರದಲ್ಲಿ ಇದ್ದ ಅವರ ಸಹೋದ್ಯೋಗಿ ಸುರೇಶ್ ಹೆಂಡತಿಯ ಮುಖ ತೋರಿಸುವಂತೆ ರಾಜೇಶ್ ಗೆ ಹೇಳಿದ್ದ.
ಈ ಮಾತಿನಿಂದ ಕೋಪಗೊಂಡ ರಾಜೇಶ್ ಮಿಶ್ರಾ ಗೆಳೆಯ ಸುರೇಶ್ ಜತೆ ವಾಗ್ವಾದ ನಡೆಸಿದರು.ಇಬ್ಬರ ಮಧ್ಯೆ ತೀವ್ರ ಜಟಾಪಟಿ ನಡೆಯಿತು.
ಜಗಳ ತಾರಕ್ಕೇರಿದಾಗ ಆರೋಪಿ ಸುರೇಶ್ ಕತ್ತರಿಯಿಂದ ರಾಜೇಶ್ ಮಿಶ್ರಾ ಅವರಿಗೆ ಬಲವಾಗಿ ಚುಚ್ಚಿದ್ದಾನೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ