newsics.com
ಹುಬ್ಬಳ್ಳಿ : ಮಾನವತೆಯ ಸಂದೇಶ ಸಾರಿದ್ದ ಚಂದ್ರಶೇಖರ್ ಗುರೂಜಿ ಮೃತದೇಹ ಹುಬ್ಬಳ್ಳಿಯ ಸುಳ್ಳ ಗ್ರಾಮಕ್ಕೆ ಆಗಮಿಸಿದೆ. ಸುಳ್ಳ ಗ್ರಾಮದಲ್ಲಿರುವ ಅವರ ಹೊಲದಲ್ಲಿ ಅಂತಿಮ ಕಾರ್ಯಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ.
ಚಂದ್ರಶೇಖರ್ ಗುರೂಜಿ ಪಾರ್ಥೀವ ಶರೀರದ ಅಂತಿಮ ಯಾತ್ರೆ ಸಂದರ್ಭದಲ್ಲಿ ಸಾಕಷ್ಟು ಜನರು ಕೈ ಮುಗಿದು ನಮಸ್ಕರಿಸುತ್ತಿದ್ದ ದೃಶ್ಯ ಕಂಡು ಬಂತು. ಚಂದ್ರಶೇಖರ್ ಗುರೂಜಿ ಪ್ರೀತಿಯಿಂದ ಸಾಕಿದ್ದ ಶ್ವಾನ ಪ್ರಿನ್ಸ್ ಕೂಡ ಮಾಲೀಕನನ್ನು ನೆನೆದು ಕಣ್ಣೀರಿಟ್ಟಿದೆ. ಪಾರ್ಥಿವ ಶರೀರವನ್ನು ಶ್ವಾನ ನೋಡುತ್ತಾ ಕುಳಿತ ದೃಶ್ಯ ಮನಕಲಕುವಂತಿತ್ತು.