Wednesday, July 6, 2022

ಬೆಂಗಳೂರಲ್ಲಿ ಗಣೇಶ ವಿಗ್ರಹ ವಿಸರ್ಜನೆಗೆ ನಿರ್ಬಂಧ

Follow Us

♦ ಹಬ್ಬಗಳ ಆಚರಣೆಗೂ ಕೊರೋನಾ ಕರಿನೆರಳು

ಬೆಂಗಳೂರು: ಕೊರೋನಾ ಸಾರ್ವಜನಿಕರ‌ ಬದುಕು ಮಾತ್ರವಲ್ಲ, ಹಬ್ಬಗಳ ಆಚರಣೆ‌ ಮೇಲೂ ಕರಿನೆರಳು ಬೀರಿದೆ. ಈ ಬಾರಿ ಹಬ್ಬಗಳನ್ನು ಅದ್ದೂರಿಯಾಗಿ ಆಚರಿಸುವುದಕ್ಕೆ ಬಿಬಿಎಂಪಿ ಬ್ರೇಕ್ ಹಾಕಿದ್ದು, ಗೌರಿ-ಗಣೇಶ ವಿಗ್ರಹಗಳನ್ನು ಕೆರೆ-ಕಲ್ಯಾಣಿಯಲ್ಲಿ ವಿಸರ್ಜಿಸುವುದಕ್ಕೆ ನಿರ್ಬಂಧ ಹೇರಿದೆ.
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹಬ್ಬಗಳ ಆಚರಣೆಗೆ ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದು, ಗೌರಿ-ಗಣೇಶ ಹಬ್ಬದಂದು ಆದಷ್ಟು ಹೊರಗಡೆಯಿಂದ ಮೂರ್ತಿ ತರಬೇಡಿ. ಇದರಿಂದ ಅಪಾಯ ‌ಹೆಚ್ಚು. ‌ಅಲ್ಲದೇ ಸಾರ್ವಜನಿಕ ಸ್ಥಳದಲ್ಲಿ ನಡೆಯುವ ಮೂರ್ತಿ ವಿಸರ್ಜನೆಯಲ್ಲೂ ಪಾಲ್ಗೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.
ಸುರಕ್ಷತೆ ದೃಷ್ಟಿಯಿಂದ ಕೆರೆ-ಕಲ್ಯಾಣಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ಬಿಬಿಎಂಪಿ‌ ಬ್ರೇಕ್ ಹೇರಿದೆ. ಇದಲ್ಲದೆ ಕೃಷ್ಣಾಷ್ಟಮಿ, ಬಕ್ರೀದ್ ಸೇರಿದಂತೆ ಯಾವುದೇ ಹಬ್ಬದಲ್ಲೂ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ.‌ ಹಬ್ಬಗಳಂದು ದೇವಸ್ಥಾನ ಭೇಟಿಯನ್ನು ಆದಷ್ಟು ತಪ್ಪಿಸಿ ಎಂದು ಕಿವಿಮಾತು ಹೇಳಿದ್ದಾರೆ.
ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷ ಎಲ್ಲ ಹಬ್ಬಗಳನ್ನು ನಿಮ್ಮ ನಿಮ್ಮ ಮನೆಯಲ್ಲೇ ಆಚರಿಸಿ ಸಂಬಂಧಿಕರು, ಸ್ನೇಹಿತರನ್ನು ಮನೆಗೆ ಆಹ್ವಾನಿಸಬೇಡಿ. ನೀವು ಯಾರ ಮನೆಗೂ ಹೋಗಬೇಡಿ. ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಮನವಿ ಮಾಡಿದ್ದಾರೆ. ಹಬ್ಬಗಳ ಹೆಸರಿನಲ್ಲಿ ಶಾಪಿಂಗ್, ಮಾರುಕಟ್ಟೆ ಭೇಟಿಯನ್ನು ಆದಷ್ಟು ಅವಾಯ್ಡ್ ಮಾಡಿ ಎಂದು ಸೂಚನೆ ನೀಡಿದ್ದಾರೆ. ಎಲ್ಲ ಹಬ್ಬಗಳನ್ನು ಕೊರೋನಾ ಸೋಂಕಿನ‌ ಭಯದ ನಡುವೆ ಆಚರಿಸಬೇಕಾಗಿರೋದರಿಂದ ಕಟ್ಟುನಿಟ್ಟಾಗಿ ಕ್ರಮ ರೂಪಿಸಲಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ಚಾಕಲೇಟ್ ಕವರ್ ನಲ್ಲಿ ವಿದ್ಯಾರ್ಥಿಗಳಿಗೆ ಡ್ರಗ್ಸ್: ನಾಲ್ವರ ಸೆರೆ

newsics.com ಬೆಂಗಳೂರು:  ವಿದ್ಯಾರ್ಥಿಗಳಿಗೆ ಚಾಕಲೇಟ್ ಕವರ್ ನಲ್ಲಿ ಅಡಗಿಸಿ ಡ್ರಗ್ಸ್ ಪೂರೈಸುತ್ತಿದ್ದ ನಾಲ್ವರು ಆರೋಪಿಗಳನ್ನು ಬೆಂಗಳೂರಿನ  ಆವಲ ಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು  ಮೊಹಮ್ಮದ್ ಅಸ್ಲಾಂ, ...

ಒಟಿಪಿ ನೀಡುವ ವಿಷಯಕ್ಕೆ ಜಗಳ: ಪ್ರಯಾಣಿಕನ ಹತ್ಯೆ ಮಾಡಿದ ಕ್ಯಾಬ್ ಚಾಲಕ

newsics.com ಚೆನ್ನೈ: ಕಾರನ್ನು ಬಾಡಿಗೆಗೆ ನಿಗದಿಪಡಿಸಿ ಪ್ರಯಾಣ ಆರಂಭಿಸುವ ಮೊದಲು ಒಟಿಪಿ ನೀಡುವ ಜಗಳ ಪ್ರಯಾಣಿಕನ ಕೊಲೆಯಲ್ಲಿ ಅಂತ್ಯವಾಗಿದೆ. ಚೆನ್ನೈ ನಗರದ ನವಲೂರಿನಲ್ಲಿ ಈ ಘಟನೆ ನಡೆದಿದೆ. ಸಾಫ್ಟವೇರ್ ಡೆವಲಪರ್ ಆಗಿರುವ...

ದೇಶದಲ್ಲಿ ಹೊಸದಾಗಿ 16,159 ಮಂದಿಗೆ ಕೊರೋನಾ ಸೋಂಕು, 28 ಜನರ ಸಾವು

newsics.com ನವದೆಹಲಿ:  ದೇಶದಲ್ಲಿ ಕೊರೋನಾದ ಹಾವಳಿ ಮುಂದುವರಿದಿದೆ.  ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 16,159 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದೇ ವೇಳೆ ಕೊರೋನಾ ಸೋಂಕಿತರಾಗಿದ್ದ 15,394 ಮಂದಿ ಗುಣಮುಖರಾಗಿದ್ದಾರೆ. ಕೊರೋನಾದಿಂದ ಕಳೆದ 24 ಗಂಟೆ...
- Advertisement -
error: Content is protected !!