newsics.com
ಯಲ್ಲಾಪುರ(ಉತ್ತರ ಕನ್ನಡ): ಇಲ್ಲಿನ ಅರಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಗ್ಯಾಸ್ ಟ್ಯಾಂಕರ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ್ದು, ಸ್ಥಳದಲ್ಲೇ ತಂದೆ- ಮಗಳು ಮೃತಪಟ್ಟಿದ್ದಾರೆ.
ಯಲ್ಲಾಪುರದ ಅಗ್ನಿಶಾಮಕ ದಳ ಠಾಣೆಯ ಸಿಬ್ಬಂದಿ ವಿನೋದ ಕಿಂದಳಕರ್ (56) ಹಾಗೂ ಸುನೇಹಾ ಕಿಂದಳಕರ್ (12) ಮೃತಪಟ್ಟವರು. ಮಂಗಳವಾರ ವಿನೋದ ಅವರು ಮಗಳ ಜತೆ ಯಲ್ಲಾಪುರದಿಂದ ಅಂಕೋಲಾ ತಾಲೂಕಿನ ಹಾರವಾಡಾಕ್ಕೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಈ ವೇಳೆ ಬೈಕ್ ಗೆ ಟ್ಯಾಂಕರ್ ಢಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಯಲ್ಲಾಪುರ ಠಾಣೆ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.
ರಾಜ್ಯದಲ್ಲಿ ನವೆಂಬರ್’ವರೆಗೂ ಶಾಲೆ ಆರಂಭ ಸಾಧ್ಯತೆಯೇ ಇಲ್ಲ
ಪುರಿ ಜಗನ್ನಾಥ ಮಂದಿರದ 351 ಸೇವಕರು, 53 ಸಿಬ್ಬಂದಿಗೆ ಕೊರೋನಾ, ಮೂವರ ಸಾವು
ಪ್ರತಿಪಕ್ಷಗಳಿಂದ ರೈತರಿಗೆ ಅಗೌರವ: ಪ್ರಧಾನಿ ಮೋದಿ ಟೀಕೆ