newsics.com
ವಿಜಯಪುರ: 75ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಭಾನುವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಲು ನಗರಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯಕರ್ತೆಯರು ಘೇರಾವ್ ಹಾಕಿದರು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಆವರಣದಲ್ಲಿ ಈ ಘಟನೆ ನಡೆದಿದೆ. ಧ್ವಜಾರೋಹಣ ನೆರವೇರಿಸಲು ಸಚಿವೆ ಜೊಲ್ಲೆ ಆಗಮಿಸುತ್ತಿದ್ದಂತೆ ಘೇರಾವ್ ಹಾಕಿ, ಕಪ್ಪು ಬಟ್ಟೆ ಪ್ರದರ್ಶಿಸಿದರು. ಭ್ರಷ್ಟಾಚಾರ ಆರೋಪ ಹೊತ್ತಿರುವ ಸಚಿವೆ ವಿಜಯಪುರ ಜಿಲ್ಲೆಗೆ ಬೇಡವೆಂದು ಘೋಷಣೆ ಕೂಗಿದರು.
ವಿಶೇಷ ಮಕ್ಕಳ ತಾಯಿಯಾಗಿ ನಾನು ತಪ್ಪು ಮಾಡಿಲ್ಲ. ತನಿಖೆಗೆ ಸಿದ್ಧ ಎಂದು ಇದೇ ವೇಳೆ ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟಪಡಿಸಿದ್ದಾರೆ.
ಧ್ವಜಸ್ತಂಭ ನಿಲ್ಲಿಸುವಾಗ ಅವಘಡ: ವಿದ್ಯುತ್ ತಂತಿ ತಗುಲಿ ಬಾಲಕ ಸಾವು, ಇಬ್ಬರು ಗಂಭೀರ
ಇನ್ನು ಸೈನಿಕ ಶಾಲೆಗಳಲ್ಲಿ ಬಾಲಕಿಯರಿಗೂ ಪ್ರವೇಶಾವಕಾಶ: ಪ್ರಧಾನಿ ಮೋದಿ ಘೋಷಣೆ