newsics.com
ಬೆಂಗಳೂರು: ನನಗೆ ಸಿಗರೇಟ್ ಬೇಕು, ದಂ ಹೊಡೀಲಿಲ್ಲ ಅಂದ್ರೆ ನನಗೆ ತಲೆ ಕೆಟ್ಟು ಹೋಗುತ್ತದೆ…
ಹೌದು, ಇವೆಲ್ಲ ನಟಿ ಸಂಜನಾ ಗಲ್ರಾನಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಆಡಿದ ಮಾತುಗಳು.
ಡ್ರಗ್ಸ್ ಆರೋಪದಲ್ಲಿ ಸದ್ಯ ಪರಪ್ಪನ ಅಗ್ರಹಾರದಲ್ಲಿರುವ ನಟಿ ಸಂಜನಾ ಗಲ್ರಾನಿ ಜೈಲಿನಲ್ಲಿ ಸಿಗರೇಟ್ ಗಾಗಿ ರಂಪಾಟ ನಡೆಸಿದ್ದಾರೆ ಎನ್ನಲಾಗಿದೆ.
ಸಂಜನಾ ಜಾಮೀನು ಅರ್ಜಿಯನ್ನು ನಾಳೆಗೆ(ಸೆ.19) ಮುಂದೂಡಲಾಗಿದ್ದು, ನಾಳೆ ಅರ್ಜಿಯ ತೀರ್ಪು ಹೊರಬರುವ ಸಾಧ್ಯತೆ ಇದೆ. ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿರುವ ಸಂಜನಾ ಜೈಲಿನಲ್ಲಿ ತನಗೆ ಸಿಗರೇಟ್ ಬೇಕು, ದಂ ಹೊಡೀಲಿಲ್ಲ ಅಂದ್ರೆ ನನಗೆ ತಲೆ ಕೆಟ್ಟು ಹೋಗುತ್ತದೆ ಎಂದು ಬೇಡಿಕೆ ಇಟ್ಟಿದ್ದಳು ಎನ್ನಲಾಗಿದೆ. ಆಗ ಪೊಲೀಸ್ ಅಧಿಕಾರಿಗಳು, ಇದು ಜೈಲು, ನಿಮ್ಮ ಮನೆಯಲ್ಲ, ನಿಮ್ಮ ಬೇಡಿಕೆ ಏನಿದ್ದರೂ ಅದನ್ನು ನ್ಯಾಯಾಧೀಶರ ಮುಂದೆ ಕೇಳಿಕೊಳ್ಳಿ. ಇಲ್ಲಿ ಎಲ್ಲರಿಗೆ ನೀಡುವ ಸೌಲಭ್ಯವನ್ನು ನಿಮಗೆ ನೀಡಲಾಗುತ್ತಿದೆ. ಕಾನೂನು ಮೀರಿ ನಿಮಗೆ ಏನನ್ನೂ ನೀಡಲು ಸಾಧ್ಯವಿಲ್ಲ ಎಂದು ಸಮಾಧಾನಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರಿನಲ್ಲಿ 3623, ರಾಜ್ಯದಲ್ಲಿ 8626 ಮಂದಿಗೆ ಸೋಂಕು, 179 ಬಲಿ
ಗೂಗಲ್ ಪ್ಲೇ ಸ್ಟೋರ್’ಗೆ ಮತ್ತೆ ಮರಳಿದ ಪೇಟಿಎಂ
ಅಮೆರಿಕದಲ್ಲೂ ಸೆ.20ರಿಂದ ಟಿಕ್ ಟಾಕ್, ವಿ ಚಾಟ್ ನಿಷೇಧ
ರಾಜ್ಯದಲ್ಲಿ ಸೆ.21ರಿಂದ ಶಾಲೆ ಮಾತ್ರ ಓಪನ್, ಕ್ಲಾಸ್ ಇರಲ್ಲ