newsics.com
ಬೆಂಗಳೂರು: ತಿಂಗಳಾಂತ್ಯದಲ್ಲಿ ಚಿನ್ನ ಮತ್ತು ಬೆಳ್ಳಿಯ ದರವು ಮತ್ತಷ್ಟು ಇಳಿಕೆ ಕಂಡಿದ್ದು, ಆಭರಣ ಪ್ರಿಯರು ಖುಷಿಯಾಗಿದ್ದಾರೆ.
ಬೆಂಗಳೂರಿನಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ದರ 5,365 ರೂ., 24 ಕ್ಯಾರೆಟ್ ಚಿನ್ನದ ದರವನ್ನು ಒಂದು ಗ್ರಾಂ ಚಿನ್ನದ ದರ 5,853 ರೂ. ಆಗಿದೆ. ನಿನ್ನೆಗಿಂತ 27 ರೂ. ಇಳಿಕೆಯಾಗಿದೆ.
ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಬೆಂಗಳೂರಿನ ದರವೇ ಇದೆ.
22 ಕ್ಯಾರೆಟ್ ಚಿನ್ನದ ದರ (10 ಗ್ರಾಂ) ಚೆನ್ನೈನಲ್ಲಿ 53,900 ರೂ., ಮುಂಬೈನಲ್ಲಿ 53,650 ರೂ., ದೆಹಲಿಯಲ್ಲಿ 53,800 ರೂ., ಕೊಲ್ಕತಾದಲ್ಲಿ 53,650 ರೂ. ಇದೆ.
ಬೆಳ್ಳಿ ಬೆಲೆಯೂ ಕುಸಿತ ಕಂಡಿದ್ದು, ಇಂದು ಒಂದು ಗ್ರಾಂ ಬೆಳ್ಳಿಗೆ 72.50 ರೂ. ಇದೆ. ಕಳೆದ ದಿನ 73 ರೂ. ಇತ್ತು. ಅಂದರೆ ಇಂದು 0.50 ಪೈಸೆ ಕಡಿಮೆಯಾಗಿದೆ.