Wednesday, November 30, 2022

ಮತ್ತೆ ಗೂಗಲ್ ಎಡವಟ್ಟು: ತಮಿಳು ಚಿತ್ರದ ಪಾತ್ರವರ್ಗದಲ್ಲಿ ಡಾ. ರಾಜ್’ಕುಮಾರ್ ಹೆಸರು

Follow Us

newsics.com
ಬೆಂಗಳೂರು: ಕನ್ನಡಿಗರ ವಿಚಾರದಲ್ಲಿ ಗೂಗಲ್ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ. 2017ರಲ್ಲಿ ತಮಿಳಿನಲ್ಲಿ ವಿಕ್ರಮ್ ವೇದ ಎಂಬ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ವಿಜಯ್​ ಸೇತುಪತಿ, ಆರ್​. ಮಾಧವನ್​, ಶ್ರದ್ಧಾ ಶ್ರೀನಾಥ್​ ಹಾಗೂ ಡಾ. ರಾಜ್​ಕುಮಾರ್​ ನಟಿಸಿದ್ದಾರೆ ಎಂದು ಗೂಗಲ್​ ಹೇಳುತ್ತಿದೆ. ತಮಿಳು ಚಿತ್ರದಲ್ಲಿ ರಾಜ್ ಕುಮಾರ್ ಅವರು ನಟಿಸಿದ್ದಾರೆ ಎಂದು ತೋರಿಸುತ್ತಿರುವುದಕ್ಕೆ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ.
ಗೂಗಲ್​ನಲ್ಲಿ ವಿಕ್ರಮ್ ವೇದ ಕಾಸ್ಟ್ ಎಂದು ಸರ್ಚ್​ ಮಾಡಿದರೆ ಹಾಫ್ ಬಾಯ್ಲ್ ಪಾತ್ರದಲ್ಲಿ ರಾಜ್​ಕುಮಾರ್​ ಹೆಸರು ಕೂಡ ತೋರಿಸುತ್ತಿದೆ.
ವಿಕ್ರಮ್​ ವೇದಾ ಸಿನಿಮಾದಲ್ಲಿ ಹಾಫ್​ ಬಾಯ್ಲ್​ ಎನ್ನುವ ಪಾತ್ರವನ್ನು ರಾಜ್​ಕುಮಾರ್​ ಹೆಸರಿನ ವ್ಯಕ್ತಿ ಮಾಡಿದ್ದಿರಬಹುದು. ಹೀಗಾಗಿ ರಾಜ್ ಕುಮಾರ್ ಅವರನ್ನು ತೋರಿಸಿರಬಹುದು ಎಂಬ ಹೇಳಿಕೆ ಹಲವರದ್ದು. ಈ ಹಿಂದೆ ugly language kannada ಎಂದು ತೋರಿಸಿ ಗೂಗಲ್ ವಿವಾದಕ್ಕೆ ಸಿಲುಕಿತ್ತು.

 

ಮೈತ್ರೀಂ ಭಜತ…

ಮತ್ತಷ್ಟು ಸುದ್ದಿಗಳು

vertical

Latest News

20ಕ್ಕೂ ಹೆಚ್ಚು ಯುವತಿಯರ ಜತೆ ಅಪ್ತಾಭ್ ಸಂಬಂಧ?

newsics.com ನವದೆಹಲಿ:  ಶ್ರದ್ಧಾ ಹತ್ಯೆ ಪ್ರಕರಣದ ಆರೋಪಿ ಅಪ್ತಾಭ್ 20ಕ್ಕೂ ಹೆಚ್ಚು ಯುವತಿಯರ ಜತೆ ಸಂಬಂಧ ಹೊಂದಿರುವ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಪೊಲೀಸ್...

ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ

newsics.com ಬೆಂಗಳೂರು:  ರಾಜಧಾನಿ ಬೆಂಗಳೂರಿನಲ್ಲಿ ಯುವತಿಯೊಬ್ಬಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಟಿ ಸಿ ಪಾಳ್ಯದಲ್ಲಿ ಈ ಪ್ರಕರಣ ವರದಿಯಾಗಿದೆ. ಮೃತಪಟ್ಟ ಮಹಿಳೆಯನ್ನು ನೇಪಾಳ ಮೂಲದ ಕೃಷ್ಣ ಕುಮಾರಿ ಎಂದು...

ಕೊರೋನಾ ಬಳಿಕ ಕೇರಳದಲ್ಲಿ ಇದೀಗ ದಡಾರ ಭೀತಿ

newsics.com ತಿರುವನಂತಪುರಂ:  ಕೇರಳ ಮತ್ತು ಮಹಾರಾಷ್ಟ್ರದಲ್ಲಿ ದಡಾರ ರೋಗ ವ್ಯಾಪಕವಾಗಿ ಹರಡುತ್ತಿದೆ. ಚಿಕ್ಕಮಕ್ಕಳು ಹೆಚ್ಚಾಗಿ ಇದರ ಸೋಂಕಿಗೆ ತುತ್ತಾಗುತ್ತಿದ್ದಾರೆ. ಕೊರೋನಾದ ಬಳಿಕ ಕೇರಳದಲ್ಲಿ ಇದೀಗ ದಡಾರ ಹಾವಳಿ ಹೆಚ್ಚಾಗಿದೆ. ಕೇರಳದ  ಮಲಪ್ಪುರಂ ಜಿಲ್ಲೆಯಲ್ಲಿ  130 ದಡಾರ...
- Advertisement -
error: Content is protected !!