ಬೆಂಗಳೂರು: ಇಂದು ರಾಜ್ಯ ವಿಧಾನಮಂಡಲ ಅಧಿವೇಶನ ಆರಂಭಗೊಂಡಿದ್ದು, ರಾಜ್ಯಪಾಲ ವಜೂಭಾಯಿ ವಾಲಾ ಅವರು ಜಂಟಿ ಸದನವನ್ನುದ್ದೇಶಿಸಿ ಮಾತನಾಡಿದರು.
ರಾಜ್ಯದ 100 ಬರ ಪೀಡಿತ ತಾಲೂಕುಗಳ ಪರಿಸ್ಥಿತಿ ಸುಧಾರಣೆಗಾಗಿ ‘ಬರ ನಿಯಂತ್ರಣ ಜಲಾನಯನ ಅಭಿವೃದ್ಧಿ’, ಎಲ್ಲಾ ಜಿಲ್ಲೆಗಳಿಗೆ ಒಳಚರಂಡಿ ನೀರನ್ನು ಸಂಸ್ಕರಿಸಿ ಕೆರೆಗಳಿಗೆ ಬಿಡುವ ಯೋಜನೆ, ಪೊಲೀಸ್ ನೇಮಕಾತಿಯಲ್ಲಿ ಶೇ. 25ರಷ್ಟು ಮೀಸಲಾತಿ, ಭಯೋತ್ಪಾದಕರು ಸೇರಿದಂತೆ ಅಪಾಯಕಾರಿ ಕ್ರಿಮಿನಲ್ ಗಳ ಸೆರೆಗೆ ಪರಪ್ಪನ ಅಗ್ರಹಾರದಲ್ಲಿ ಭದ್ರತಾ ಕಾರಾಗೃಹ ಸೇರಿದಂತೆ ಸರ್ಕಾರದ ಸಾಧನೆಗಳ 67 ಅಂಶಗಳನ್ನು ರಾಜ್ಯಪಾಲರು ಸದನದ ಮುಂದಿಟ್ಟರು.