Saturday, April 17, 2021

ಸೀರಿಯಲ್, ಸಿನಿಮಾ ಶೂಟಿಂಗ್’ಗೆ ಸರ್ಕಾರ ಸಮ್ಮತಿ

ಬೆಂಗಳೂರು: ಧಾರಾವಾಹಿ, ಸಿನಿಮಾಗಳ ಹೊರಾಂಗಣ ಶೂಟಿಂಗ್’ಗೂ ಅನುಮತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕೊರೋನಾ ಲಾಕ್’ಡೌನ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಧಾರಾವಾಹಿ, ಸಿನಿಮಾ ಶೂಟಿಂಗ್’ಗೆ ನಿರ್ಬಂಧ ವಿಧಿಸಿತ್ತು. ಲಾಕ್ ಡೌನ್ ನಿಂದಾಗಿ ಅರ್ಧಕ್ಕೇ ಸ್ಥಗಿತಗೊಂಡಿದ್ದ ಸಿನಿಮಾ ಚಿತ್ರೀಕರಣ ನಡೆಸಬಹುದು ಎಂದು ಸರ್ಕಾರ ಹೇಳಿದೆ.
ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಸಿನಿಮಾ ಚಿತ್ರೀಕರಣಗಳನ್ನು ಒಳಾಂಗಣದಲ್ಲಿ ಮಾಡುವುದಕ್ಕೆ ಅನುಮತಿ ನೀಡಿತ್ತು. ಈ ಹಿಂದೆ ಧಾರಾವಾಹಿಗಳ ಚಿತ್ರೀಕರಣ ಮಾಡುವುದಕ್ಕೆ ಷರತ್ತಿನ ಮೇರೆಗೆ ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಈಗ ಧಾರಾವಾಹಿ, ಅರ್ಧಕ್ಕೇ ಸ್ಥಗಿತಗೊಂಡಿದ್ದ ಸಿನಿಮಾದ ಹೊರಾಂಗಣ ಶೂಟಿಂಗ್’ಗೆ ಅನುಮತಿ ನೀಡಿದೆ.

ಮತ್ತಷ್ಟು ಸುದ್ದಿಗಳು

Latest News

ತ್ರಿಬಲ್ ಟಿ ಸೂತ್ರ ಪಾಲನೆಗೆ ಪ್ರಧಾನಿ ಮೋದಿ ಸಲಹೆ

newsics.com ನವದೆಹಲಿ: ಇಂದಿಲ್ಲಿ (ಏ.17) ನಡೆದ ಕೊರೋನಾ ಹಿನ್ನೆಲೆಯ ಮಹತ್ವದ ಸಭೆಯ ಬಳಿಕ ಪ್ರಧಾನಿ ಮೋದಿಯವರು ತ್ರಿಬಲ್ ಟಿ ಸೂತ್ರ ಅನುಷ್ಠಾನಗೊಳಿಸುವಂತೆ ಸೂಚಿಸಿದ್ದಾರೆ. ದೇಶದಲ್ಲಿ ಅತಿಯಾಗಿ ಹೆಚ್ಚುತ್ತಿರುವ ಕೊರೋನಾ...

ಆಮ್ಲಜನಕ‌ ಕೊರತೆ: ಐಸಿಯುನಲ್ಲಿದ್ದ ಮೂವರು ಕೊರೋನಾ ಸೋಂಕಿತರು ಸಾವು

newsics.com ಲಖನೌ (ಉತ್ತರ ಪ್ರದೇಶ): ಆಮ್ಲಜನಕದ ಕೊರತೆಯಿಂದಾಗಿ ಮೂವರು ಕೋವಿಡ್ ರೋಗಿಗಳು ಶನಿವಾರ ಸಾವನ್ನಪ್ಪಿದ್ದಾರೆ. ಮೃತರು ಗೋಮ್ಟಿನಗರದ ಡಾ. ರಾಮ್ ಮನೋಹರ್ ಲೋಹಿಯಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಐಸಿಯುಗೆ ದಾಖಲಾಗಿದ್ದರು. ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು,...

ಆಸ್ಪತ್ರೆಗೆ ನುಗ್ಗಿ 850 ರೆಮಿಡಿಸಿವರ್ ಇಂಜೆಕ್ಷನ್ ಕಳ್ಳತನ

newsics.com ಭೋಪಾಲ್(ಮಧ್ಯಪ್ರದೇಶ): ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿಗಳು 850 ರೆಮಿಡಿಸಿವರ್ ಇಂಜೆಕ್ಷನ್ ಗಳನ್ನು ಕಳ್ಳತನ ಮಾಡಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ನಡುವೆ ಕಾಳಸಂತೆಯಲ್ಲಿ ಔಷಧ ಮಾರಾಟದ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಈ...
- Advertisement -
error: Content is protected !!