ಬೆಂಗಳೂರು: ಲಾಕ್ ಡೌನ್ ಸಮಯದಲ್ಲೂ ಮದುವೆ/ಈವೆಂಟ್ಸ್ ನಡೆಸಲು ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ.
ಆರೋಗ್ಯ ಇಲಾಖೆಯ ಮಾರ್ಗಸೂಚಿ ಬಿಡುಗಡೆ ಪ್ರಕಾರ, ಗರ್ಭಿಣಿಯರು, 65 ವರ್ಷ ಮೇಲ್ಪಟ್ಟವರು ಮತ್ತು 10 ವರ್ಷದೊಳಗಿನ ಮಕ್ಕಳು ಭಾಗವಹಿಸುವಂತಿಲ್ಲ. ಅದೇ ರೀತಿ 50 ಜನಕ್ಕಿಂತ ಹೆಚ್ಚಿನ ಜನ ಭಾಗವಹಿಸುವಂತಿಲ್ಲ.
ಸ್ಥಳೀಯ ಆಡಳಿತದಿಂದ ಅನುಮತಿ ಮತ್ತು ಪಾಸ್ ಕಡ್ಡಾಯವಾಗಿ ಪಡೆದು ಸಂಚರಿಸಬೇಕು. ಹವಾನಿಯಂತ್ರಣ ವ್ಯವಸ್ಥೆ ಇರಬಾರದು. ಸ್ವಾಭಾವಿಕ ವೆಂಟಿಲೇಷನ್ ಇರಬೇಕು. ಕಂಟೇನ್ಮೆಂಟ್ ಜೋನ್ ನಲ್ಲಿರುವ ಯಾವುದೇ ವ್ಯಕ್ತಿ ಭಾಗವಹಿಸಬಾರದು. ಪ್ರವೇಶದ ಸ್ಥಳ ಮತ್ತು ಅಗತ್ಯವಿರುವ ಕಡೆಗಳಲ್ಲಿ ಸ್ಯಾನಿಟೈಸರ್ ಇರಬೇಕು. ಎಲ್ಲರಿಗೂ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯವಾಗಿದ್ದು ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಬೇಕು.
1 ಮೀಟರ್ ದೈಹಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಮದ್ಯ, ಗುಟ್ಕಾ, ಪಾನ್ ತಂಬಾಕು ಸೇವನೆಗೆ ಅವಕಾಶ ಇರುವುದಿಲ್ಲ. ಹೈಜೆನಿಕ್ ಆಗಿರಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಉಗಿಯಬಾರದು. ಮದುವೆಯಲ್ಲಿ ಭಾಗವಹಿಸುವವರ ಹೆಸರು ಮತ್ತು ಫೋನ್ ನಂಬರ್ ನೀಡಬೇಕು. ಎಲ್ಲರೂ ಆರೋಗ್ಯ ಸೇತು ಆಪ್ ಡೌನ್ ಲೋಡ್ ಮಾಡಿಕೊಳ್ಳಬೇಕು ಎಂದು ಹೇಳಲಾಗಿದೆ.