newsics.com
ಬೆಂಗಳೂರು: ಅಡಕೆ ಕುರಿತ ಸಂಶೋಧನೆ ಹಾಗೂ ಕ್ಲಿನಿಕಲ್ ಟ್ರಯಲ್ ಗೆ ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಎಂ.ಎಸ್. ರಾಮಯ್ಯ ಸ್ಥಂಸ್ಥೆಯ ಅಪ್ಲೈಡ್ ಸೈನ್ಸ್ ವಿಭಾಗಕ್ಕೆ ಸಂಶೋಧನೆ ಹಾಗೂ ಕ್ಲಿನಿಕಲ್ ಟ್ರಯಲ್ ಹೊಣೆಗಾರಿಕೆ ನೀಡಲು ಮುಂದಾಗಿದೆ.
ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಮುಂದಿನ 15 ತಿಂಗಳ ಅವಧಿಯಲ್ಲಿ ಎಂ.ಎಸ್. ರಾಮಯ್ಯ ಸಂಸ್ಥೆಯ ಅಪ್ಲೈಡ್ ಸೈನ್ಸ್ ನ ತಜ್ಞರು ವರದಿ ಸಲ್ಲಿಸಲಿದ್ದಾರೆ. ರಾಜ್ಯದ ಅಡಕೆ ಬೆಳೆಯುವ ಎಲ್ಲಾ ಪ್ರದೇಶಗಳಿಂದ ವಿವಿಧ ತಳಿಯ ಅಡಕೆ ಮಾದರಿ ಸಂಗ್ರಹಿಸಿ ಸಂಶೋಧನೆ ನಡೆಸಲಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಶಾಸಕ ಆರಗ ಜ್ಞಾನೇಂದ್ರ, ಅಡಕೆ ಕುರಿತ ಸಂಶೋಧನೆಗೆ ಎಂ.ಎಸ್. ರಾಮಯ್ಯ ಸಂಸ್ಥೆಯವರು ಪ್ರಸ್ತಾವನೆ ಸಲ್ಲಿಸಿದ್ದಾರೆ. 15 ತಿಂಗಳಲ್ಲಿ ವರದಿ ಬರಲಿದ್ದು, ಈ ಕಾರ್ಯಕ್ಕೆ ಬೇಕಾದ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಅಡಕೆ ಸಂಶೋಧನೆಗೆ ಸರ್ಕಾರ ನಿರ್ಧಾರ
Follow Us