Tuesday, August 9, 2022

ಮಾಸ್ಕ್ ಧರಿಸದಿದ್ದರೆ ವಿಧಿಸುವ ದಂಡ ಪ್ರಮಾಣ ಹೆಚ್ಚಿಸಿದ ಸರ್ಕಾರ

Follow Us

♦ ನಗರ ಪ್ರದೇಶದಲ್ಲಿ ಸಾವಿರ, ಗ್ರಾಮೀಣ ಭಾಗದಲ್ಲಿ 500 ರೂ.

newsics.com
ಬೆಂಗಳೂರು: ನೀವಿನ್ನು ಮಾಸ್ಕ್ ಧರಿಸದೆ ಹೊರಹೋದರೆ ದುಬಾರಿ ದಂಡ ಪಾವತಿಸಬೇಕಾಗಬಹುದು.

ಇಂತಹದೊಂದು ಕಠಿಣ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಮತ್ತಷ್ಟು ಬಿಗಿ ಕ್ರಮವನ್ನು ಕೈಗೊಂಡಿರುವ ರಾಜ್ಯ ಸರ್ಕಾರ, ಮಾಸ್ಕ್ ಧರಿಸುವ ಕಡ್ಡಾಯ ನಿಯಮವನ್ನು ಮತ್ತಷ್ಟು ಬಿಗಿಗೊಳಿಸಿದೆ. ಮಾಸ್ಕ್ ಅನ್ನು ಧರಿಸದೆ ನಗರ ಪ್ರದೇಶದಲ್ಲಿ ಓಡಾಡಿದ್ರೆ ರೂ.1000 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮಾಸ್ಕ್ ಧರಿಸದವರಿಗೆ ರೂ.500 ದಂಡ ವಿಧಿಸುವ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಸ್ಕ್ ಧರಿಸದವರಿಗೆ ದಂಡ ಶುಲ್ಕವನ್ನು ಮತ್ತಷ್ಟು ಹೆಚ್ಚಿಸಲಾಗಿದೆ ಎಂದರು.
ಅಂಗಡಿಗಳ ಬಳಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಅಂಗಡಿಗಳ ಬಳಿ ಗ್ರಾಹಕರು, ಅಂಗಡಿಯವರು 6 ಅಡಿಗಳ ಅಂತರ ಕಾಯ್ದುಗೊಳ್ಳಬೇಕು. ಅಂತರ ಕಾಯ್ದುಕೊಳ್ಳದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು
ಸಚಿವ ಸುಧಾಕರ್ ತಿಳಿಸಿದರು.

ಮೆಟ್ರೋದ 28 ಲೋಕೋ ಪೈಲಟ್, ಸ್ಟೇಷನ್‌ ಕಂಟ್ರೋಲರ್‌ಗಳಿಗೆ ಕೊರೋನಾ

ಅಕ್ಟೋಬರ್ 15ರವರೆಗೆ ಶಾಲಾ-ಕಾಲೇಜು ಬಂದ್

ಕೊರೋನಾ ಕಾಲದಲ್ಲೂ ಫ್ಯಾಷನ್ ಟ್ರೆಂಡ್…!

ಮತ್ತಷ್ಟು ಸುದ್ದಿಗಳು

vertical

Latest News

12 ಸಾವಿರಕ್ಕಿಂತ ಕಡಿಮೆ ಬೆಲೆಯ ಚೀನಾ ಮೊಬೈಲ್ ಬ್ಯಾನ್‌ಗೆ ಕೇಂದ್ರ ಸರ್ಕಾರ ಚಿಂತನೆ

newsics.com ನವದೆಹಲಿ: ಚೀನಾ ಕಂಪನಿಗಳ 12,000 ರೂ.ಗಳಿಗಿಂತ (150 ಡಾಲರ್) ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಮಾರಾಟ ನಿರ್ಬಂಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಕುಗ್ಗುತ್ತಿರುವ ದೇಶೀಯ ಮೊಬೈಲ್ ಉದ್ಯಮ...

ಮಹಿಳೆಯರ ಎದುರು ಬೆತ್ತಲಾಗುತ್ತಿದ್ದ ವ್ಯಕ್ತಿಯ ಸಜೀವ ದಹನಕ್ಕೆ ಯತ್ನ, ಸ್ಥಿತಿ ಗಂಭೀರ

newsics.com ಬೆತುಲ್(ಮಧ್ಯಪ್ರದೇಶ): ಮಹಿಳೆಯರು ಮತ್ತು ಯುವತಿಯರ ಎದುರು ಅಶ್ಲೀಲವಾಗಿ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಊರಿನ ಜನರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಆತನ ಪರಿಸ್ಥಿತಿ ಚಿಂತಾಜನಕವಾಗಿದೆ. ಈ‌ ಸಂಬಂಧ ಇಬ್ಬರನ್ಮು‌ ಬಂಧಿಸಲಾಗಿದೆ ಈ ಘಟನೆ ಮಧ್ಯಪ್ರದೇಶದ...

ಹಾವಿಗೆ ಹಾಲಲ್ಲ, ರಕ್ತಾಭಿಷೇಕ!

newsics.com ವಿಜಯನಗರ: ಶ್ರಾವಣ ಮಾಸದ ಎರಡನೇ ಭಾನುವಾರ ನಾಗರ ಹುತ್ತಕ್ಕೆ ಪೂಜೆ ಮಾಡಿ ರಕ್ತಾಭಿಷೇಕ ಮಾಡುವ ವಿಶೇಷ ಆಚರಣೆ ವಿಜಯನಗರದ ಕೂಡ್ಲಿಗಿ ತಾಲೂಕಿನ ಬತ್ತನ ಹಳ್ಳಿಯಲ್ಲಿದೆ. ಕೊರಚ ಮತ್ತು‌ ಕೊರಮ ಸಮುದಾಯದ ಜನರು ನಾಗರ ಪಂಚಮಿ...
- Advertisement -
error: Content is protected !!