Thursday, August 18, 2022

ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿ ಹಿಂಪಡೆದ ಸರ್ಕಾರ!

Follow Us

newsics.com
ಕೊಪ್ಪಳ: ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದ್ದ ಸರ್ಕಾರ ಈಗ ವಾಪಸ್ ಪಡೆದಿರುವ ಪ್ರಸಂಗ ನಡೆದಿದೆ.
ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದ ತೊಗಲುಗೊಂಬೆ ಕಲಾವಿದ ಕೇಶಪ್ಪ ಶಿಳ್ಳಿಕ್ಯಾತರ್ ಅವರ ಹೆಸರನ್ನ ಸರ್ಕಾರ ಪ್ರಶಸ್ತಿ ಪಟ್ಟಿಯಿಂದ ಕೈಬಿಟ್ಟು ಆದೇಶ‌ ಹೊರಡಿಸಿದೆ. ಕೊಪ್ಪಳ ಜಿಲ್ಲೆಯ ಕೋಟಾದಲ್ಲೀಗ ರಂಗಭೂಮಿ ಕಲಾವಿದೆ ಜಿ. ವಂದನಾ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ವಿಷಯ ತಿಳಿಯುತ್ತಿದ್ದಂತೆ ಖುಷಿಯಾಗಿದ್ದ ಕೇಶಪ್ಪ ಹಾಗೂ ಅವರ ಕುಟುಂಬಸ್ಥರು, ಪ್ರಶಸ್ತಿ ವಾಪಸ್ ಪಡೆದ ಹಿನ್ನೆಲೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಶಸ್ತಿ ಹಿಂಪಡೆಯಲು ಕಲಾವಿದ ಕೇಶಪ್ಪ ಅವರ ವಯಸ್ಸೇ ಕಾರಣ ಎನ್ನಲಾಗಿದೆ. ಕೇಶಪ್ಪ ಅವರ ಆಧಾರ್ ಕಾರ್ಡ್ ಮಾಹಿತಿ ಪ್ರಕಾರ ಅವರಿಗೆ 46 ವರ್ಷ ವಯಸ್ಸಾಗಿದ್ದು, ರಾಜ್ಯೋತ್ಸವ ಪ್ರಶಸ್ತಿಗೆ 60 ವರ್ಷ ಪರಿಗಣಿಸಲಾಗುತ್ತದೆ. ಹೀಗಾಗಿ, ಅವರ ವಯಸ್ಸು 46 ಇರುವುದರಿಂದ ಕೇಶಪ್ಪ ಅವರಿಗೆ ಘೋಷಿಸಲಾಗಿದ್ದ ರಾಜ್ಯೋತ್ಸವ ಪ್ರಶಸ್ತಿಯನ್ನು ರದ್ದುಪಡಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಹೆಚ್.ಕೆ. ಸುರೇಶಬಾಬು ಅವರು ಆದೇಶದಲ್ಲಿ ತಿಳಿಸಿದ್ದಾರೆ. ಪ್ರಶಸ್ತಿ ಘೋಷಿಸಿ ಹಿಂಪಡೆಯುವುದು ಕಲಾವಿದರಿಗೆ ಮಾಡುವ ಅವಮಾನ. ಹೀಗಿರುವಾಗ, ಕಲಾವಿದ ಕೇಶಪ್ಪ ಅವರ ವಯಸ್ಸಿನ ವಿಚಾರ ಸರ್ಕಾರಕ್ಕೆ ಮೊದಲೇ ಯಾಕೆ ತಿಳಿಯಲಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ.

ಕೆಎಎಸ್ ಅಧಿಕಾರಿ ಡಾ. ಸುಧಾ ಮನೆ ಮೇಲೆ ಎಸಿಬಿ ದಾಳಿ

ಕೇರಳ ರಾಜ್ಯಪಾಲರಿಗೆ ಕೊರೋನಾ ಸೋಂಕು ದೃಢ

ಮತ್ತಷ್ಟು ಸುದ್ದಿಗಳು

vertical

Latest News

ಮಸೀದಿಯಲ್ಲಿ ಬಾಂಬ್ ಸ್ಫೋಟ: 21 ಮಂದಿ ಸಾವು, 40ಕ್ಕೂ ಹೆಚ್ಚು ಜನರಿಗೆ ಗಾಯ

newsics.com ಕಾಬೂಲ್‌(ಅಫ್ಘಾನಿಸ್ತಾನ): ಕಾಬೂಲ್‌ನಲ್ಲಿ ಮಸೀದಿಯೊಂದರ ಮೇಲೆ ಭಯೋತ್ಪಾದಕರು ಬಾಂಬ್ ದಾಳಿ ನಡೆಸಿದ್ದು, 21 ಜನ ಸಾವನ್ನಪ್ಪಿದ್ದಾರೆ. 40ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಕಾಬೂಲ್‌ನ ಖೈರ್ ಖಾನಾ ಪ್ರದೇಶದ ಮಸೀದಿಯಲ್ಲಿ...

ರಾಜ್ಯದಲ್ಲಿಂದು 886 ಹೊಸ ಕೊರೋನಾ ಸೋಂಕು ಪ್ರಕರಣ ಪತ್ತೆ, ಮೂವರ ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 886 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇದೇ ಅವಧಿಯಲ್ಲಿ ಮೂವರು ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಅವಧಿಯಲ್ಲಿ 1,999 ಸೋಂಕಿತರು ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 8,764ರಷ್ಟಾಗಿದೆ....

ವೃದ್ಧರಿಗೆಂದೇ ಇರುವ ಸ್ಟಾರ್ಟಪ್‌ನಲ್ಲಿ ರತನ್‌ ಟಾಟಾ ಹೂಡಿಕೆ

newsics.com ಬೆಂಗಳೂರು: ವೃದ್ಧರಿಗೆ ಜತೆಯಾಗಿದ್ದುಕೊಂಡು ಸೇವೆ ಸಲ್ಲಿಸಲೆಂದು ಆರಂಭವಾಗಿರುವ ಸ್ಟಾರ್ಟಪ್‌ ಕಂಪನಿಯಲ್ಲಿ ಹಿರಿಯ ಉದ್ಯಮಿ ರತನ್ ಟಾಟಾ ಹೂಡಿಕೆ ಮಾಡಲು ಮುಂದಾಗಿದ್ದಾರೆ. ದೇಶಾದ್ಯಂತ ಸುಮಾರು 5 ಕೋಟಿ ವೃದ್ಧರು ಸಂಗಾತಿಗಳಿಲ್ಲದೇ ಒಂಟಿಯಾಗಿದ್ದಾರೆ. ಅವರಿಗೆ ಈ ಕಂಪನಿ...
- Advertisement -
error: Content is protected !!