newsics.com
ನವದೆಹಲಿ: ವಿಮಾನ ನಿಲ್ದಾಣಗಳ ಸುತ್ತಮುತ್ತ 5ಜಿ ನೆಟ್ವರ್ಕ್ ಒದಗಿಸಬಾರದು (ಸಿ–ಬ್ಯಾಂಡ್) ಎಂದು ಟೆಲಿಕಾಂ ಇಲಾಖೆ ಆದೇಶ ಮಾಡಿದೆ.
ವಿಮಾನ ನಿಲ್ದಾಣದ ಸುತ್ತಮುತ್ತ 2.1 ಕಿಲೋಮೀಟರ್ ವ್ಯಾಪ್ತಿಯಲ್ಲಿ 5ಜಿ ತರಂಗಾಂತರಗಳು ಏರ್ಕ್ರಾಫ್ಟ್ ರೆಡಿಯೊ ತರಂಗಾಂತರಗಳನ್ನು ಕೆಲಸ ಮಾಡಲು ಬಿಡುವುದಿಲ್ಲ. ವಿಮಾನ ಲ್ಯಾಂಡಿಂಗ್ ಆಗುವಾಗ ಅಪಘಾತ ಆಗುವ ಅಪಾಯ ಇರುತ್ತದೆ . 5ಜಿ ಅಳವಡಿಕೆಯಲ್ಲಿ ತೊಡಗಿಸಿಕೊಂಡಿರುವ ದೇಶದ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೊ, ಏರ್ಟೆಲ್ ಹಾಗೂ ವೋಡಾಫೋನ್ ಕಂಪನಿಗಳಿಗೆ ಟೆಲಿಕಾಂ ಇಲಾಖೆ ಆದೇಶ ಪತ್ರ ಕಳುಹಿಸಿದೆ.
ಈಗಾಗಲೇ ಅಮೆರಿಕ ಸೇರಿದಂತೆ ಅನೇಕ ವಿಮಾನ ನಿಲ್ದಾಣಗಳಲ್ಲಿ ಲ್ಯಾಂಡಿಂಗ್ ವೇಳೆ 5ಜಿ ಹೈಸ್ಪೀಡ್ ತರಂಗಾಂತರಗಳಿಂದ ತೊಂದರೆ ಆಗುತ್ತಿದೆ ಎಂದು ಪೈಲಟ್ಗಳು ದೂರಿರುವ ಘಟನೆಗಳು ವರದಿಯಾಗಿವೆ.