ಬೆಂಗಳೂರು: ಗೌರಿ ಲಂಕೇಶ್ ಹತ್ಯೆಯ ಆರೋಪಿಗಳು ಕೋಡ್ ವರ್ಡ್ ಮೂಲಕವೇ ಸಂಭಾಷಣೆ ನಡೆಸುತ್ತಿದ್ದರಂತೆ. ಹತ್ಯೆಗೆ ಬಳಸಿದ್ದ ಪಿಸ್ತೂಲ್ ಅನ್ನು ಸುದರ್ಶನ ಚಕ್ರ ಎಂದು, ಹತ್ಯೆಯನ್ನು ಸಂಹಾರ ಎಂದು, ಸಂಹಾರದ ನಂತರ ಸುದರ್ಶನ ಚಕ್ರ ಕೃಷ್ಣನ ಕೈ ಸೇರಿದೆ ಎಂಬ ಕೋಡ್ ವರ್ಡ್ ಗಳಿಂದ ಸಂಭಾಷಣೆ ನಡೆಸುತ್ತಿದ್ದರು ಎಂದು ತನಿಖೆ ವೇಳೆ ಮಾಹಿತಿ ಲಭ್ಯವಾಗಿದೆ.
ಗುರುವಾರ ಜಾರ್ಖಂಡ್ ನಲ್ಲಿ ರಿಷಿಕೇಶ್ ದೇವ್ಡೇಕರ್ ಅಲಿಯಾಸ್ ಮುರುಳಿಯನ್ನು ಎಸ್ ಐಟಿ ತಂಡ ಬಂಧಿಸಿದ್ದು, ಈತ ಗೌರಿ ಲಂಕೇಶ್ ಹಾಗೂ ಎಂ ಎಂ ಕಲ್ಬುರ್ಗಿ ಅವರ ಹತ್ಯೆಯಲ್ಲಿಯೂ ಪ್ರಮುಖ ಆರೋಪಿಯಾಗಿದ್ದ ಎಂದು ತಿಳಿದು ಬಂದಿದೆ.
ಗೌರಿ ಲಂಕೇಶ್ ಹತ್ಯೆ: ಕೋಡ್ ವರ್ಡ್ ಸಂಭಾಷಣೆ ಬಯಲು
Follow Us