Sunday, May 29, 2022

ಮಾಸ್ಕ್ ಧರಿಸುವ ವಿಚಾರಕ್ಕೆ ಕೈ ಮಿಲಾಯಿಸಲು ಮುಂದಾದ ಸಚಿವ-ಶಾಸಕ

Follow Us

newsics.com
ಬೆಂಗಳೂರು:
ತೋಟಗಾರಿಕಾ ಕ್ಷೇತ್ರದ ಅನುದಾನಕ್ಕೆ ಸಂಬಂಧಿಸಿದ ಶಾಸಕ ಮತ್ತು ಸಚಿವರ ನಡುವಿನ ಮಾತುಕತೆ ವಾಗ್ವಾದವಾಗಿ ಬಳಿಕ ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ವಿಧಾನಸೌಧದ ಮೊಗಸಾಲೆಯಿಂದ ವರದಿಯಾಗಿದೆ.

ತೋಟಗಾರಿಕಾ ಸಚಿವ ಕೆ.ಸಿ.ನಾರಾಯಣಗೌಡ ಹಾಗೂ ಕಡೂರು ಶಾಸಕ ಬೆಳ್ಳಿಪ್ರಕಾಶ್ ನಡುವೆ ಈ ವಾಗ್ವಾದ ನಡೆದಿದೆ. ತೋಟಗಾರಿಕಾ ಸಚಿವ ನಾರಾಯಣಗೌಡ್ರು ಉಪಹಾರ ಗೃಹದತ್ತ ತೆರಳುತ್ತಿದ್ದ ವೇಳೆ ಶಾಸಕ ಬೆಳ್ಳಿಪ್ರಕಾಶ್ ಸ್ಥಳಕ್ಕೆ ಆಗಮಿಸಿ ತಮ್ಮ ಕ್ಷೇತ್ರಕ್ಕೆ ಬರಬೇಕಾದ ಅನುದಾನ ವಿಳಂಬವಾಗುತ್ತಿರುವುದರ ಬಗ್ಗೆ ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಸಚಿವರು ಮಾಸ್ಕ್ ಧರಿಸಿ ಮಾತನಾಡುವಂತೆ ಶಾಸಕ ಬೆಳ್ಳಿಪ್ರಕಾಶ್ ಗೆ ಸೂಚಿಸಿದ್ದಾರೆ. ಇದೇ ವಿಚಾರಕ್ಕೆ ಆರಂಭವಾದ ವಾಗ್ವಾದ ಬಳಿಕ ಕೈ ಕೈ ಮಿಲಾಯಿಸುವ ಹಂತ ತಲುಪಿದೆ.
ತಕ್ಷಣವೇ ಸ್ಥಳದಲ್ಲಿದ್ದ ಇತರ ಶಾಸಕರು ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದಾರೆ ಎನ್ನಲಾಗಿದೆ. ಈ ಗಲಾಟೆ ವೇಳೆ ಮಾಜಿ ಸಿಎಂ ಸಿದ್ಧರಾಮಯ್ಯ, ಸಚಿವ ಕೆ.ಎಸ್.ಈಶ್ವರಪ್ಪ ಸೇರಿದಂತೆ ಹಲವು ಹಿರಿಯರು ಸ್ಥಳದಲ್ಲೇ ಇದ್ದರು ಎನ್ನಲಾಗಿದೆ.

ಮತ್ತಷ್ಟು ಸುದ್ದಿಗಳು

Latest News

ಪತ್ನಿಯೊಂದಿಗೆ ಲೈಂಗಿಕ ಕ್ರಿಯೆ ಬಳಿಕ ಸ್ಮರಣ ಶಕ್ತಿಯನ್ನೇ ಕಳೆದು ಕೊಂಡ ಪತಿ!

newsics.com ಪತ್ನಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ 10 ನಿಮಿಷದ ಬಳಿಕ ವ್ಯಕ್ತಿಯು ನೆನಪಿನ ಶಕ್ತಿ ಕಳೆದುಕೊಂಡ ವಿಚಿತ್ರ ಘಟನೆಯು ಐರಿಷ್ ನಲ್ಲಿ ನಡೆದಿದೆ. ಇದೊಂದು ಅಲ್ಪಾವಧಿ ಸ್ಮರಣ ಶಕ್ತಿ...

ತನ್ನ ಆಯಸ್ಸಿನ ಮೂಲಕವೇ ವಿಶ್ವ ದಾಖಲೆ ನಿರ್ಮಿಸಿದೆ ಈ ಶ್ವಾನ!

newsics.com ಶ್ವಾನಗಳು ಅಬ್ಬಬ್ಬಾ ಅಂದ್ರೆ 8- 10 ವರ್ಷ ಬದುಕುತ್ತದೆ. ಕೆಲವೊಂದು ನಾಯಿಗಳು 15 ವರ್ಷಗಳ ಕಾಲ ಬದುಕಿದ ಇತಿಹಾಸ ಕೂಡ ಇದೆ. ಆದರೆ ಪೆಬ್ಲಸ್ ಹೆಸರಿನ ಟಾಯ್ ಫ್ಯಾಕ್ಸ್ ಟೆರಿಯರ್ ಜಾತಿಗೆ ಸೇರಿದ ನಾಯಿಯೊಂದು...

ಮಹಾರಾಷ್ಟ್ರದ ನಾಲ್ವರಲ್ಲಿ ಒಮೈಕ್ರಾನ್ ಉಪತಳಿ ಪತ್ತೆ 

newsics.com ಮಹಾರಾಷ್ಟ್ರ: ಒಮೈಕ್ರಾನ್ ಉಪತಳಿ BA 4 ಮತ್ತು BA 5 ಸೋಂಕು ಇದೇ ಮೊದಲ ಬಾರಿಗೆ ಮಹಾರಾಷ್ಟ್ರದ ನಾಲ್ವರಲ್ಲಿ ಪತ್ತೆಯಾಗಿದೆ.ಸೋಂಕಿತರೆಲ್ಲರೂ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುಣೆಯಿಂದ ಬಂದಿದ್ದ ಏಳು ರೋಗಿಗಳಲ್ಲಿ ಒಮೈಕ್ರಾನ್ ಉಪತಳಿಗಳ ಸೋಂಕು...
- Advertisement -
error: Content is protected !!