Wednesday, November 30, 2022

ಕಲಾ ವಿಮರ್ಶಕ ಮೈಸೂರು ವಿ. ಸುಬ್ರಹ್ಮಣ್ಯ ಇನ್ನಿಲ್ಲ

Follow Us

newsics.com

ಮೈಸೂರು: ಖ್ಯಾತ ಕಲಾ ವಿಮರ್ಶಕ ಮೈಸೂರು ವಿ. ಸುಬ್ರಹ್ಮಣ್ಯ ಶುಕ್ರವಾರ ನಿಧನರಾದರು.

ವೀಣೆ ಶೇಷಣ್ಣ ಅವರ ವಂಶದಲ್ಲಿ ಜನಿಸಿದ್ದ ಮೈಸೂರು ವಿ. ಸುಬ್ರಹ್ಮಣ್ಯ ಅವರು ಸಹಜವಾಗಿಯೇ ಸಂಗೀತಾಸಕ್ತಿ ಹೊಂದಿದ್ದರು. ಮೈಸೂರು ವಿ. ಸುಬ್ರಹ್ಮಣ್ಯ ಅವರ ತಂದೆ ವೆಂಕಟನಾರಾಯಣರಾಯರು ಶೇಷಣ್ಣನವರ ಮೊಮ್ಮಕ್ಕಳಾಗಿದ್ದು, ಶ್ರೇಷ್ಠ ವೈಣಿಕರೂ, ಬೋಧಕರೂ, ಬರಹಗಾರರೂ, ವಾಗ್ಮಿಯೂ ಆಗಿದ್ದರು. ಅಪಾರ ಸಂಗೀತಜ್ಞಾನದಿಂದಾಗಿ ಅವರಿಗೆ ಬಾಲ್ಯದಲ್ಲೇ ‘ಸ್ವರಮೂರ್ತಿ’ ಎಂಬ ಬಿರುದು ದೊರಕಿತ್ತು.

ಪಂಡಿತ ವಂಶಿಕರಾದ ವಿ. ಸುಬ್ರಹ್ಮಣ್ಯ ಅವರು ಗಾಯನ ಮತ್ತು ವೀಣಾವಾದನವನ್ನು ತಂದೆಯವರಿಂದ ಕಲಿಯುವುದರೊಟ್ಟಿಗೆ, ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದರು. ತಂದೆಯವರು ಆರಂಭಿಸಿದ ‘ವೀಣಾಗಾನ ಮಂದಿರ’ವನ್ನು ನಡೆಸುತ್ತಿದ್ದರು. ಸುಬ್ರಹ್ಮಣ್ಯ ಅವರು ಖ್ಯಾತ ವಿಮರ್ಶಕರಾಗಿದ್ದ ಬಿ.ವಿ.ಕೆ. ಶಾಸ್ತ್ರಿಗಳ ಮಾರ್ಗದರ್ಶನವನ್ನೂ ಕೂಡ ಪಡೆದಿದ್ದರು.

ಸುಬ್ರಹ್ಮಣ್ಯ ಅವರು ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳಲ್ಲಿ ಕಲಾವಿಮರ್ಶಕರಾಗಿ ಸುಪರಿಚಿತರಾಗಿದ್ದರು.ಅರ್ಹ ಯುವಕಲಾವಿದರ ಬೆನ್ನುತಟ್ಟುತ್ತಾ, ಅವರಿಗೆ ವೇದಿಕೆಗಳನಿತ್ತು ಕಲಾಭಿವೃದ್ಧಿಗೆ ಕಾರಣರಾಗಿದ್ದರು. ಸರಸ-ಸಂಭಾಷಿಗರಾಗಿದ್ದ ಅವರು ಉತ್ತಮ ವಾಗ್ಮಿಗಳೂ ಆಗಿದ್ದರು.

ಮುರುಘಾ ಶ್ರೀ ಚೆಕ್ ಗಳಿಗೆ ಸಹಿ ಹಾಕಲು ಹೈಕೋರ್ಟ್ ಅನುಮತಿ​

ಮತ್ತಷ್ಟು ಸುದ್ದಿಗಳು

vertical

Latest News

ವಿಮಾನ ನಿಲ್ದಾಣಗಳ ಸುತ್ತಮುತ್ತ 5ಜಿ ನಿಷೇಧ

newsics.com ನವದೆಹಲಿ:  ವಿಮಾನ ನಿಲ್ದಾಣಗಳ ಸುತ್ತಮುತ್ತ 5ಜಿ ನೆಟ್‌ವರ್ಕ್ ಒದಗಿಸಬಾರದು (ಸಿ–ಬ್ಯಾಂಡ್) ಎಂದು ಟೆಲಿಕಾಂ ಇಲಾಖೆ ಆದೇಶ ಮಾಡಿದೆ. ವಿಮಾನ ನಿಲ್ದಾಣದ ಸುತ್ತಮುತ್ತ 2.1 ಕಿಲೋಮೀಟರ್ ವ್ಯಾಪ್ತಿಯಲ್ಲಿ  5ಜಿ...

ಹಾಕಿ ಟೆಸ್ಟ್‌- 13 ವರ್ಷದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಗೆದ್ದ ಭಾರತ

newsics.com ಸಿಡ್ನಿ: ಹಾಕಿ ಟೆಸ್ಟ್‌ ನಲ್ಲಿ ಭಾರತ 13 ವರ್ಷದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಗೆದ್ದಿದೆ. ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಹಾಕಿ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡ 4 3 ಗೋಲ್ ಗಳ...

ಕುಕ್ಕರ್ ಬಾಂಬರ್‌ ಶಾರೀಕ್ ಖಾತೆಗೆ ಹಣ ವರ್ಗಾವಣೆ

newsics.com ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಶಾರೀಕ್‌ಗೆ ಡಾಲರ್‌ಗಳ ಮೂಲಕ ಆತನ ಖಾತೆಗೆ ವರ್ಗಾವಣೆಯಾಗುತ್ತಿದ್ದು ಎನ್ನುವ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ. ಶಾರೀಕ್‌ ಡಾರ್ಕ್ ವೆಬ್ ಮೂಲಕ ಖಾತೆ ತೆರೆದಿದ್ದು, ಡಾಲರ್‌ಗಳ ಮೂಲಕ...
- Advertisement -
error: Content is protected !!