newsics.com
ಬೆಂಗಳೂರು: ಹತ್ಯೆಗೀಡಾಗಿರುವ ಚಂದ್ರ ಶೇಖರ್ ಗುರೂಜಿ ತಮ್ಮಗೆ ಯಾವುದೇ ಆಸ್ತಿ ನೀಡಿಲ್ಲ. ಬೇನಾಮಿ ಆಸ್ತಿ ಕೂಡ ನಾವು ಹೊಂದಿಲ್ಲ ಎಂದು ಪ್ರಕರಣದ ಹತ್ಯೆ ಆರೋಪಿಯ ಪತ್ನಿ ವನಜಾಕ್ಷಿ ಹೇಳಿದ್ದಾರೆ.
ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಬಳಿ ಒಂದೇ ಒಂದು ಪ್ಲ್ಯಾಟ್ ಇದೆ. ಅದನ್ನು ಸಾಲ ಪಡೆದು ಖರೀದಿ ಮಾಡಿದ್ದೇವೆ. ಸಾಲ ಕಟ್ಟುತ್ತಿದ್ದೇವೆ ಎಂದು ವನಜಾಕ್ಷಿ ಹೇಳಿದ್ದಾರೆ.
ಪತಿ ಮಹಾಂತೇಶ್ ಹತ್ಯೆ ಮಾಡಬಹುದು ಎಂದು ನಾನು ಯೋಚಿಸಿರಲಿಲ್ಲ. ಗುರೂಜಿ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. 2005ರಲ್ಲಿ ಅವರ ಜತೆ ಕೆಲಸಕ್ಕೆ ಸೇರಿದ್ದೆ ಎಂದು ವನಜಾಕ್ಷಿ ಬಹಿರಂಗಪಡಿಸಿದ್ದಾರೆ.