newsics.com
ಶಿವಮೊಗ್ಗ: ಕಚೇರಿ ವೇಳೆಯಲ್ಲೇ ಸಮವಸ್ತ್ರ ಧರಿಸಿ ಮೋಜು-ಮಸ್ತಿ, ಗುಂಡು, ತುಂಡು, ಅರೆಬೆತ್ತಲಾಗಿ ನೃತ್ಯ ಮಾಡಿದ ಆರು ಮೆಸ್ಕಾಂ ನೌಕರರನ್ನು ಅಮಾನತುಗೊಳಿಸಲಾಗಿದೆ.
ಮೋಜು-ಮಸ್ತಿ, ಗುಂಡು, ತುಂಡು, ಅರೆಬೆತ್ತಲಾಗಿ ನೃತ್ಯ ಮಾಡಿದ ಮೆಸ್ಕಾಂ ನೌಕರರ ವಿಡಿಯೋ ವೈರಲ್ ಆಗಿದ್ದು, 6 ಮೆಸ್ಕಾಂ ನೌಕರರನ್ನು ಅಮಾನತುಗೊಳಿಸಿ ಕಾರ್ಯಪಾಲಕ ಇಂಜಿನಿಯರ್ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಶಿಕಾರಿಪುರ ಪಟ್ಟಣದ ಮೆಸ್ಕಾಂ ಸಿಬ್ಬಂದಿಗಳಾದ ಚಂದ್ರಶೇಖರ ರಾಥೋಡ್, ಎಸ್.ಎ ರವಿ ಹಾಗೂ ವಿನಯ್ ಕುಮಾರ್ ಕೆ.ಎಲ್, ಮಂಜುನಾಥ್ ಕೆ.ಎಸ್, ಸುರೇಶ್ ಎಲ್, ಮಹೇಶ್ವರಪ್ಪ ಟಿ. ಅವರು ನ.4 ರಂದು ಕಚೇರಿ ಕರ್ತವ್ಯದ ವೇಳೆಯಲ್ಲಿ ಕಂಪನಿಯ ಸಮವಸ್ತ್ರ ಧರಿಸಿ ಮದ್ಯಪಾನ ಮಾಡಿ ಅರೆಬೆತ್ತಲಾಗಿ, ಮೋಜು ಮಸ್ತಿ ಮಾಡಿದ ಆರೋಪ ಇವರ ಮೇಲಿದೆ.
ಅಂಜನಾಪುರ ಜಲಾಶಯದ ಬಳಿ ಕರ್ತವ್ಯ ಸಮಯದಲ್ಲಿ ಮೆಸ್ಕಾಂ ಸಮವಸ್ತ್ರದಲ್ಲಿ ಮದ್ಯಪಾನ, ಅರೆಬೆತ್ತಲಾಗಿರುವ ವಿಡಿಯೋ ಹಾಗೂ ಬೈಕ್ ನಲ್ಲಿ ಸ್ಟಂಟ್ ಮಾಡಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನನ್ನ ಜೀವ ಅಪಾಯದಲ್ಲಿದೆ ಎಂದಿರುವ ಅರ್ನಾಬ್ ಗೋ ಸ್ವಾಮಿ