Thursday, August 18, 2022

ಹರಿಕಥಾ ವಿದ್ವಾಂಸ ಕೃಷ್ಣಮೂರ್ತಿ ನಿಧನ

Follow Us

newsics.com
ಬೆಂಗಳೂರು: ಸಂಗೀತಗಾರ, ಹರಿಕಥಾ ವಿದ್ವಾಂಸ, ಆಕಾಶವಾಣಿ ಕಲಾವಿದ ದೊಡ್ಡಬಳ್ಳಾಪುರದ ವಿ.ಕೃಷ್ಣಮೂರ್ತಿ (89) ನಿಧನರಾದರು.
ವಯೋಸಹಜ ಅನಾರೋಗ್ಯದಿಂದ ಕೃಷ್ಣಮೂರ್ತಿ ಅವರು ಶುಕ್ರವಾರ ಕೊನೆಯುಸಿರೆಳೆದರು. ಪತ್ನಿ, ನಾಲ್ವರು ಪುತ್ರಿಯರು ಮತ್ತು ಓರ್ವ ಪುತ್ರ ಇದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ ಮುಖ್ಯ ಶಿಕ್ಷಕರಾಗಿ ಕೃಷ್ಣಮೂರ್ತಿ ಅವರು ಕಾರ್ಯನಿರ್ವಹಿಸಿದ್ದರು. ನೂರಾರು ಜನರಿಗೆ ನಾಟಕಗಳನ್ನು ಕಲಿಸಿದ್ದ ಕೃಷ್ಣಮೂರ್ತಿ ಅವರು, ಕಾಶಿ ವಿಶ್ವೇಶ್ವರ ದೇಗುಲದೊಂದಿಗೆ ಭಾವುಕ ನಂಟು ಹೊಂದಿದ್ದರು. ಪುರೋಹಿತರಾಗಿ ಮತ್ತು ಭಜನೆ ಗುರುಗಳಾಗಿಯೂ, ಆಕಾಶವಾಣಿ ಕಲಾವಿದರಾಗಿದ್ದ ಕೃಷ್ಣಮೂರ್ತಿ ಅವರು ಸಂಗೀತಗಾರರಾಗಿಯೂ ಜನಪ್ರಿಯರಾಗಿದ್ದರು.

ಮತ್ತಷ್ಟು ಸುದ್ದಿಗಳು

vertical

Latest News

ಶಾಲೆ, ಕಾಲೇಜುಗಳಲ್ಲಿ ರಾಷ್ಟ್ರ ಗೀತೆ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

newsics.com ಬೆಂಗಳೂರು:  ರಾಜ್ಯದ ಎಲ್ಲ ಶಾಲೆಗಳಲ್ಲಿ ಪ್ರತಿ ದಿನ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ರಾಜ್ಯ  ಸರ್ಕಾರ ಈ ಸಂಬಂಧ ಆದೇಶ ಹೊರಡಿಸಿದೆ. ಪದವಿ ಪೂರ್ವ ಕಾಲೇಜುಗಳಿಗೆ ಕೂಡ...

ಪತ್ನಿಯನ್ನು ಇತರ ಮಹಿಳೆಯರ ಜತೆ ಹೋಲಿಸುವುದು ಮಾನಸಿಕ ಕ್ರೌರ್ಯ: ಕೇರಳ ಹೈಕೋರ್ಟ್ ತೀರ್ಪು

newsics.com ಎರ್ನಾಕುಳಂ:  ಮದುವೆಯಾದ ಬಳಿಕ ಪತ್ನಿಯನ್ನು ಇತರ ಮಹಿಳೆಯರ ಜತೆ ಹೋಲಿಸುವ   ಪ್ರವೃತ್ತಿ ಇರುವವರಿಗೆ ಕೇರಳ ಹೈಕೋರ್ಟ್ ಎಚ್ಚರಿಕೆ ನೀಡಿದೆ. ನೀನು ಅವರಷ್ಟು ಸುಂದರವಾಗಿಲ್ಲ ಎಂದು ಮೂದಲಿಸುತ್ತಿದ್ದರೆ ಅದು ಮಾನಸಿಕ ಕ್ರೌರ್ಯ ಎಂದು ಕೇರಳ ಹೈಕೋರ್ಟ್...

ಸಹಜ ಸ್ಥಿತಿಗೆ ಮರಳುತ್ತಿರುವ ಶಿವಮೊಗ್ಗ: ನಿಷೇಧಾಜ್ಞೆ ಮುಂದುವರಿಕೆ

newsics.com ಶಿವಮೊಗ್ಗ:  ಫ್ಲೆಕ್ಸ್ ವಿವಾದದ ಹಿನ್ನೆಲೆಯಲ್ಲಿ ಹಿಂಸಾಚಾರ ಭುಗಿಲೆದ್ದ ಶಿವಮೊಗ್ಗದಲ್ಲಿ ಇದೀಗ ಪರಿಸ್ಥಿತಿ ಶಾಂತವಾಗಿದೆ. ಜನ ಜೀವನ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ನಿಷೇಧಾಜ್ಞೆ ಮುಂದುವರಿಸಲಾಗಿದೆ. ಶಿವಮೊಗ್ಗ ಮತ್ತು ಭದ್ರಾವತಿ ನಗರದ ಸೂಕ್ಷ್ಮ...
- Advertisement -
error: Content is protected !!