ಬೆಳಗಾವಿ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಹೋದರನೊಬ್ಬ ಮೃತಪಟ್ಟ ಸುದ್ದಿ ಕೇಳಿ ಆಘಾತದಿಂದ ಆತನ ಇಬ್ಬರೂ ಸಹೋದರಿಯರು ಸಾವನ್ನಪಿದ್ದಾರೆ.
ಮನ ಕಲಕುವ ಈ ಘಟನೆಯಿಂದ ಇಡೀ ಗ್ರಾಮ ಶೋಕದಲ್ಲಿ ಮುಳುಗಿದ್ದು, ಮೂವರ ಅಂತ್ಯಕ್ರಿಯೆಯನ್ನು ಗ್ರಾಮಸ್ಥರು ಒಟ್ಟಿಗೇ ನಡೆಸಿದ್ದಾರೆ. ಬೆಳಗಾವಿ ತಾಲೂಕಿನ ಪಂಥಬಾಳೇಕುಂದ್ರಿ ಗ್ರಾಮದ ವಜೀದ್ ಜಮಾದಾರ್ (65) ಎಂಬಾತ ಅನಾರೋಗ್ಯದಿಂದ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ. ಎರಡು ದಿನಗಳ ಕಾಲ ಬಿಮ್ಸ್ ನಲ್ಲಿ ಚಿಕಿತ್ಸೆಯ ಬಳಿಕ ಆತ ಮೃತಪಟ್ಟಿದ್ದಾನೆ. ಈ ಸಾವಿನ ಸುದ್ದಿ ಕೇಳಿದ ಹಿರಿಯ ಸಹೋದರಿ ಹುಸೇನ್ ಬಿ (68) ಹೃದಯಾಘಾತದಿಂದ ಮೃತಪಟ್ಟಿದ್ದಾಳೆ. ಈಗಾಗಲೇ ವಜೀದ್ ಜಮಾದಾರ್ ಕಳೆದುಕೊಂಡಿದ್ದ ಕುಟುಂಬ ಇದೀಗ ಮತ್ತೊಂದು ಜೀವ ಕಳೆದುಕೊಂಡು ದುಃಖದಲ್ಲಿ ಮುಳುಗಿದೆ. ಸಹೋದರ, ಸಹೋದರಿ ಮೃತಪಟ್ಟ ಸುದ್ದಿ ತಿಳಿದು ತಕ್ಷಣ ಕಾಕತಿ ಗ್ರಾಮದಲ್ಲಿರುವ ವಸೀದ ಜಮಾದಾರ್ (65) ಕುಸಿದುಬಿದ್ದು ಅಸುನೀಗಿದ್ದಾಳೆ.
ಜನ ಹೋಗ್ತಿರೋದು ಕ್ವಾರಂಟೈನ್’ಗೆ, ಹನಿಮೂನ್’ಗಲ್ಲ…!
ಒಡಹುಟ್ಟಿದವರ ಹಠಾತ್ ಸಾವಿಗೆ ಪಂಥಬಾಳೇಕುಂದ್ರಿ ಗ್ರಾಮಸ್ಥರು ಕಂಬನಿ ಮಿಡಿದಿದ್ದು, ಮೂವರ ಅಂತ್ಯಕ್ರಿಯೆಯನ್ನು ಗ್ರಾಮಸ್ಥರೇ ಏಕಕಾಲದಲ್ಲಿ ಬುಧವಾರ ನಡೆಸಿದರು.