Wednesday, October 5, 2022

ಪ್ರಿ ವೆಡ್ಡಿಂಗ್ ಶೂಟ್ ದುರಂತಕ್ಕೆ ಹೈಹೀಲ್ಡ್ ಚಪ್ಪಲಿ ಕಾರಣವಂತೆ…!

Follow Us

NEWSICS.COM
ಮೈಸೂರು: ಕಳೆದ ಎರಡು ದಿನಗಳ‌ ಹಿಂದೆ (ನ.9) ಜಿಲ್ಲೆಯ ಟಿ.ನರಸೀಪುರದಲ್ಲಿ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ವೇಳೆ ಸಂಭವಿಸಿದ ದುರಂತಕ್ಕೆ ವಧು ಶಶಿಕಲಾ ಧರಿಸಿದ್ದ ಹೈಹೀಲ್ಡ್ ಚಪ್ಪಲಿ ಹಾಗೂ ಭಾರವಾದ ಡ್ರೆಸ್ ಕಾರಣ ಎಂದು ತಿಳಿದುಬಂದಿದೆ.
ದುರಂತ ವೇಳೆ ಸ್ಥಳದಲ್ಲಿದ್ದ ಜನರ ಪ್ರಕಾರ, ತೆಪ್ಪದಲ್ಲಿ ಕುಳಿತುಕೊಳ್ಳುವಾಗ ಶಶಿಕಲಾ ಹೈಹೀಲ್ಡ್ ಚಪ್ಪಲಿ ಸ್ಲಿಪ್ ಆದ ಪರಿಣಾಮ ತೆಪ್ಪ ಮಗುಚಿದೆ ಎಂದು ಹೇಳಲಾಗಿದೆ. ತೆಪ್ಪ ಸಮತಟ್ಟಾಗಿರದ ಕಾರಣ ಹೈಹೀಲ್ಡ್ ಚಪ್ಪಲಿ ಜಾರಿದ್ದು, ಬ್ಯಾಲೆನ್ಸ್ ತಪ್ಪಿ ಶಶಿಕಲಾ ನದಿಗೆ ಬಿದ್ದಿದ್ದಾಳೆ. ಇದರಿಂದ ಶಶಿಕಲಾ ಜತೆಗಿದ್ದ ಚಂದ್ರು ಕೂಡ ಬ್ಯಾಲೆನ್ಸ್ ತಪ್ಪಿದ್ದಾರೆ. ಆದರೂ ಶಶಿಕಲಾ ಅವರನ್ನು ರಕ್ಷಿಸಲು ಮುಂದಾದರೂ ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

ಪ್ರಿ ವೆಡ್ಡಿಂಗ್ ಫೋಟೊಶೂಟ್; ತೆಪ್ಪ ಮುಳುಗಿ ವಧು, ವರ ಸಾವು

ಅಲ್ಲದೆ, ದುರಂತ ನಡೆದ ದಿನ ತಲಕಾಡು ಗ್ರಾಮದ ಮುಡುಕುತೊರೆಯ ಕಾವೇರಿ ಸಂಗಮದಲ್ಲಿ ಸಾಕಷ್ಟು ಪ್ರವಾಸಿಗರಿದ್ದರು. ಆದರೆ ದುರಂತ ನಡೆದ ಭಾಗದಲ್ಲಿ ಜನ ಇರಲಿಲ್ಲ. ನದಿಯ ಇನ್ನೊಂದು ದಡದಲ್ಲಿ ಸಾಕಷ್ಟು ಜನರಿದ್ದರು. ಆಗ ಅಲ್ಲಿದ್ದವರು ಬದುಕಿಸುವ ಸಾಧ್ಯತೆಯಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಈ ಮಧ್ಯೆ, ಪ್ರಿ ವೆಡ್ಡಿಂಗ್ ಫೋಟೋ ಶೂಟ್ ವೇಳೆ ಕಾವೇರಿ ನದಿಯಲ್ಲಿ ತೆಪ್ಪ ಮುಳುಗಿ ವಧು-ವರ ಸಾವನ್ನಪ್ಪಿದ ಪ್ರಕರಣ ಸಂಬಂಧ 6 ಮಂದಿ ವಿರುದ್ಧ ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ ಸಂಬಂಧ ಪೊಲೀಸರು ಫೋಟೋ ಶೂಟ್’ನಲ್ಲಿ ಭಾಗವಹಿಸಿ ಮೃತಪಟ್ಟ ಚಂದ್ರು, ಶಶಿಕಲಾ, ಫೋಟೋಗ್ರಾಫರ್, ತೆಪ್ಪ ನೀಡಿದ ಕಟ್ಟೆಪುರ ನಿವಾಸಿ ಮೂಗಪ್ಪ ಸೇರಿ 6 ಜನರ ವಿರುದ್ಧ ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಮಾಹಿತಿ ನೀಡಿದ್ದಾರೆ.

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ದುರಂತ; 6 ಮಂದಿ ವಿರುದ್ಧ ಕೇಸ್

ನ.9 ರಂದು ಪ್ರಿ ವೆಡ್ಡಿಂಗ್​ ಫೋಟೋ ಶೂಟ್​ ಮಾಡುತ್ತಿದ್ದ ವೇಳೆ ವಧು-ವರ ಸಾವನ್ನಪ್ಪಿದ್ದರು. ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ತಲಕಾಡು ಗ್ರಾಮದ ಕಾವೇರಿ ಸಂಗಮದಲ್ಲಿ ನಡೆದಿತ್ತು. ತಲಕಾಡಿನಲ್ಲಿ ಪ್ರಿ ವೆಡ್ಡಿಂಗ್ ಫೋಟೋಶೂಟ್​ ವೇಳೆ ತೆಪ್ಪ ಮುಳುಗಿ ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿಗಳಾದ ವಧು ಶಶಿಕಲಾ, ವರ ಚಂದ್ರು ಮೃತಪಟ್ಟಿದ್ದರು.
ತಲಕಾಡಿನ ಮುಡುಕುತೊರೆಯ ಕಾವೇರಿ ನದಿಯಲ್ಲಿ ತೆಪ್ಪದ ಮೇಲೆ ನಿಂತು ಫೋಟೋ ಶೂಟ್ ಮಾಡುತ್ತಿದ್ದಾಗ ಆಯತಪ್ಪಿ ಶಶಿಕಲಾ ನದಿಗೆ ಬಿದ್ದಿದ್ದರು. ಶಶಿಕಲಾಳನ್ನು ಹಿಡಿಯಲು ಹೋಗಿ ಚಂದ್ರು ಸಹ ನದಿಗೆ ಬಿದ್ದಿದ್ದರು. ಈಜು ಬಾರದ ಹಿನ್ನೆಲೆಯಲ್ಲಿ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು‌. ನವೆಂಬರ್ 22 ರಂದು ಚಂದ್ರು, ಶಶಿಕಲಾ‌ ಮದುವೆಯಾಗಬೇಕಿತ್ತು.

ಉಗ್ರ ಸಂಘಟನೆಗಳೊಂದಿಗೆ ನಂಟು ಆರೋಪ: ಎನ್ ಐ ಎ ಯಿಂದ ಶಿರಸಿ ಯುವಕನ ಬಂಧನ

ಭಾರತ- ಚೀನಾ ಗಡಿ ವಿವಾದ:ಸೇನಾ ಹಿಂತೆಗೆತ ಮಾತುಕತೆಯಲ್ಲಿ ಯಶಸ್ಸು

ಮತ್ತಷ್ಟು ಸುದ್ದಿಗಳು

vertical

Latest News

ಜಂಬೂಸವಾರಿಗೆ ಕ್ಷಣಗಣನೆ: ಇಂದು ಮಧ್ಯಾಹ್ನ ಚಾಲನೆ

newsics.com ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಬುಧವಾರ(ಅ.5) ಮಧ್ಯಾಹ್ನ 3 ಗಂಟೆ ಹೊತ್ತಿಗೆ ಜಂಬೂಸವಾರಿ ಆರಂಭಗೊಳ್ಳಲಿದೆ. ಬುಧವಾರ ಮಧ್ಯಾಹ್ನ 2.36ರಿಂದ 2.50ರವರೆಗೆ ಸಲ್ಲುವ ಶುಭ ಮಕರ...

ದೇಶದ ಗಡಿಯಲ್ಲಿ ಶೃಂಗೇರಿ ಶಾರದೆಗೆ ಪೂಜೆ: ಇಂದು‌ ಮೂರ್ತಿ ಹಸ್ತಾಂತರ

newsics.com ಚಿಕ್ಕಮಗಳೂರು: ಭಾರತದ ಗಡಿಯಲ್ಲೂ ಶೃಂಗೇರಿಯ ಶಾರದೆ ಪೂಜೆಗೊಳ್ಳಲಿದ್ದಾಳೆ. ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಪ್ರದೇಶ ತೀತ್ವಾಲ್‌ನಲ್ಲಿ ನಿರ್ಮಾಣವಾಗುತ್ತಿರುವ ದೇಗುಲಕ್ಕೆ ಶೃಂಗೇರಿ ಮಠದಿಂದ ಶಾರದೆಯ ಪಂಚಲೋಹ ವಿಗ್ರಹ ರವಾನೆಯಾಗಲಿದೆ. ಈ ವಿಗ್ರಹ ಹಸ್ತಾಂತರ ಕಾರ್ಯ ವಿಜಯದಶಮಿ ದಿನವಾರ...

ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ ಸೋಲು

newsics.com ನವದೆಹಲಿ: ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಕೊನೆಯ ಟಿ-20 ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. 227 ರನ್​​​ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಇಂಡಿಯಾ ಆರಂಭದಿಂದಲೇ ಮುಗ್ಗರಿಸಿತು. ದಿನೇಶ್ ಕಾರ್ತಿಕ್ 46 ರನ್​ ಹಾಗೂ...
- Advertisement -
error: Content is protected !!