newsics.com
ಬೀದರ್: ತಾಲೂಕಿನ ನಿಜಾಂಪೂರ ಗ್ರಾಮದಲ್ಲಿ ಶನಿವಾರ ಕೆರೆ ಬಳಿ ಆಟವಾಡುತ್ತಿದ್ದ ಅಕ್ಕ ಮತ್ತು ತಮ್ಮ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ತಾಲೂಕಿನ ಕೋಳಾರ(ಕೆ) ಗ್ರಾಮದ ಅನು ಫಕ್ರು (8) ಮತ್ತು ಆಕೆಯ ತಮ್ಮ ಅರಸು ಫಕ್ರು (6) ಮೃತಪಟ್ಟಿರುವ ಮಕ್ಕಳು. ಶನಿವಾರ ಮಧ್ಯಾಹ್ನ ಸೈಕಲ್ ಟೈರ್ ಜತೆ ನೀರಿಗಿಳಿದು ಆಟವಾಡುತ್ತಿದ್ದಾಗ ನೀರುಪಾಲಾಗಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಇಬ್ಬರು ಮಕ್ಕಳ ಮೃತ ದೇಹಗಳು ಕೆರೆಯಲ್ಲಿ ಪತ್ತೆಯಾಗಿದ್ದು, ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಬೀದರ್’ನ ನೂತನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆರೆಯಲ್ಲಿ ಆಟವಾಡುತ್ತಿದ್ದ ಅಕ್ಕ, ತಮ್ಮ ನೀರುಪಾಲು
Follow Us