ಶಿರಸಿ: ಖ್ಯಾತ ಯಕ್ಷಗಾನ ಭಾಗವತರು, ಯಕ್ಷ ಋಷಿ ಹೊಸ್ತೋಟ ಮಂಜುನಾಥ ಭಾಗವತ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಕೆಲ ದಿನಗಳಿಂದ ವಯೋಸಹಜ ಬಳಲಿಕೆಯಿಂದ ಅವರು ಅಸ್ವಸ್ಥರಾಗಿದ್ದಾರೆ. ಸನ್ಯಾಸಿಯಾಗಿ ಜೀವನ ಸಾಗಿಸಿದ ಭಾಗವತರ ಆರೈಕೆಯ ಜವಾಬ್ದಾರಿಯನ್ನು ಶಿರಸಿಯ ಯಕ್ಷ ಶಾಲ್ಮಲಾ ಟ್ರಸ್ಟ್ ಪ್ರಮುಖರು ಹಾಗೂ ಶಿಷ್ಯರು ನಿರ್ವಹಿಸುತ್ತಿದ್ದಾರೆ ಎಂದು ಟ್ರಸ್ಟ್ ಕಾರ್ಯದರ್ಶಿ ನಾರಾಯಣ ಹೆಗಡೆ ಗಡಿಕೈ ಮಾಹಿತಿ ನೀಡಿದ್ದಾರೆ.