Wednesday, October 5, 2022

ಮರುಬಳಕೆ ಪ್ಲಾಸ್ಟಿಕ್’ನಿಂದ ತಯಾರಾಯ್ತು ಸುಂದರ‌ ಮನೆ!

Follow Us

NEWSICS.COM
ಮಂಗಳೂರು: ಮರು ಬಳಕೆಯ ಪ್ಲಾಸ್ಟಿಕ್ ಉಪಯೋಗಿಸಿ ಮಂಗಳೂರಿನ ಪಚ್ಚನಾಡಿಯಲ್ಲಿ ಪರಿಸರ ಸ್ನೇಹಿ ಮನೆಯೊಂದನ್ನು ನಿರ್ಮಾಣ ಮಾಡಲಾಗಿದೆ.
ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಇಂತಹ ಮನೆ ನಿರ್ಮಾಣವಾಗಿದೆ. ಈ ಪರಿಸರ ಸ್ನೇಹಿ ಮನೆಯನ್ನು ‘ಪ್ಲಾಸ್ಟಿಕ್ ಫಾರ್ ಚೇಂಜ್ ಇಂಡಿಯಾ ಪೌಂಡೇಶನ್’ ನಿರ್ಮಿಸಿದೆ. ತ್ಯಾಜ್ಯ ಸಂಗ್ರಹಕಾರರಿಗಾಗಿ 4.50 ಲಕ್ಷ ರೂ.ಗಳಲ್ಲಿ ನಿರ್ಮಿಸಲಾಗಿದೆ. ಇದಕ್ಕಾಗಿ 1500 ಕೆಜಿ ಮರುಬಳಕೆಯ ಪ್ಲಾಸ್ಟಿಕ್ ಬಳಸಲಾಗಿದೆ. 25 ಕೆಜಿ ಪ್ಲಾಸ್ಟಿಕ್’ನಿಂದ 60 ಪ್ಯಾನಲ್’ಗಳನ್ನು ತಯಾರಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಪೌಂಡೇಶನ್’ನ ಅಧಿಕಾರಿ ಶಿಫ್ರಾ ಜೇಕಬ್ಸ್, ‘ಇದನ್ನು ಹೈದ್ರಾಬಾದ್’ನ ನಿರ್ಮಾಣ ಪಾಲುದಾರರ ಸಹಾಯದಿಂದ ತಯಾರಿಸಿದ್ದು, ನವೀನ ಮತ್ತು ಪರಿಸರ ಯೋಜನೆಯಾಗಿದೆ ಎಂದಿದ್ದಾರೆ.
ಯೋಜನೆಯ ಎರಡನೇ ಹಂತದಲ್ಲಿ 20 ಮನೆಗಳನ್ನು 20 ಟನ್‌ಗಿಂತ‌ ಹೆಚ್ಚು ಮರು ಬಳಕೆ ಪ್ಲಾಸ್ಟಿಕ್ ಬಳಸಿ ತಯಾರಿಸಲಾಗುವುದು ಎಂದಿದ್ದಾರೆ.
ಅಷ್ಟೇ ಅಲ್ಲ, ಕಡಿಮೆ ಆದಾಯದ ಸಮುದಾಯದ ಮಕ್ಕಳ ಶಿಕ್ಷಣವನ್ನು ಮುಂದುವರೆಸುವ ಸಲುವಾಗಿ ಪೂರಕ ಬೋಧನಾ ತರಗತಿಗಳನ್ನು ಒದಗಿಸುವ ಮೂಲಕ ಸಮುದಾಯದಲ್ಲಿ 6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ವರ್ಚುವಲ್ ಆನ್‌ಲೈನ್ ತರಗತಿಗಳನ್ನು ಸ್ಮಾರ್ಟ್ ಟಿವಿಯೊಂದಿಗೆ ಸ್ಥಾಪಿಸುವ ಹೆಜ್ಜೆ ಹಾಕಿದ್ದೇವೆ. ಈಗಾಗಲೇ 20 ಮಕ್ಕಳು ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ದುರಂತ; 6 ಮಂದಿ ವಿರುದ್ಧ ಕೇಸ್

ಪ್ರಿ ವೆಡ್ಡಿಂಗ್ ಶೂಟ್ ದುರಂತಕ್ಕೆ ಕಾರಣವಾದ ಹೈಹೀಲ್ಡ್ ಚಪ್ಪಲಿ

ಮತ್ತಷ್ಟು ಸುದ್ದಿಗಳು

vertical

Latest News

ದೇಶದ ಗಡಿಯಲ್ಲಿ ಶೃಂಗೇರಿ ಶಾರದೆಗೆ ಪೂಜೆ: ಇಂದು‌ ಮೂರ್ತಿ ಹಸ್ತಾಂತರ

newsics.com ಚಿಕ್ಕಮಗಳೂರು: ಭಾರತದ ಗಡಿಯಲ್ಲೂ ಶೃಂಗೇರಿಯ ಶಾರದೆ ಪೂಜೆಗೊಳ್ಳಲಿದ್ದಾಳೆ. ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಪ್ರದೇಶ ತೀತ್ವಾಲ್‌ನಲ್ಲಿ ನಿರ್ಮಾಣವಾಗುತ್ತಿರುವ ದೇಗುಲಕ್ಕೆ ಶೃಂಗೇರಿ ಮಠದಿಂದ ಶಾರದೆಯ ಪಂಚಲೋಹ ವಿಗ್ರಹ ರವಾನೆಯಾಗಲಿದೆ. ಈ...

ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ ಸೋಲು

newsics.com ನವದೆಹಲಿ: ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಕೊನೆಯ ಟಿ-20 ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. 227 ರನ್​​​ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಇಂಡಿಯಾ ಆರಂಭದಿಂದಲೇ ಮುಗ್ಗರಿಸಿತು. ದಿನೇಶ್ ಕಾರ್ತಿಕ್ 46 ರನ್​ ಹಾಗೂ...

ದೇಶದ ಶೇ.90ಕ್ಕಿಂತ ಹೆಚ್ಚು ಸ್ಟಾರ್ಟ್‌ಅಪ್‌ಗಳು ವಿಫಲ: ಬಿಲಿಯನೇರ್ ಆನಂದ್ ಮಹೀಂದ್ರ

newsics.com ನವದೆಹಲಿ: ದೇಶದ ಶೇ.90ರಷ್ಟು ಸ್ಟಾರ್ಟ್‌ಅಪ್‌ಗಳು ವಿಫಲವಾಗಿವೆ ಎಂದು ಬಿಲಿಯನೇರ್ ಆನಂದ್ ಮಹೀಂದ್ರ ಹೇಳಿದ್ದಾರೆ. ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಟ್ವೀಟ್ ಮಾಡಿ, ಎಲ್ಲಾ ಸ್ಟಾರ್ಟ್‌ಅಪ್‌ಗಳಲ್ಲಿ 90% ಕ್ಕಿಂತ ಹೆಚ್ಚು ವಿಫಲವಾಗಿವೆ. ಒಂದು-ಆಫ್ ಸನ್ನಿವೇಶಗಳಿಂದಾಗಿ...
- Advertisement -
error: Content is protected !!