newsics.com
ಮೈಸೂರು: ಮದುವೆಯಲ್ಲಿ ತಾಳಿ ಕಟ್ಟುವ ವೇಳೆ ಮದುಮಗಳು ವರನಿಗೆ ಶಾಕ್ ಕೊಟ್ಟಿದ್ದು, ತಾನು ಪ್ರೀತಿಸಿದ ಹುಡುಗನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಾಳೆ.
ಮದುಮಗಳು ಸಿಂಚನ ತನ್ನ ಪಕ್ಕದ ಮನೆಯ ಯುವಕನನ್ನು ಪ್ರೀತಿಸಿದ್ದು, ಆದರೆ ಮನೆಯವರು ಎಚ್.ಡಿ.ಕೋಟೆ ಯುವಕನೊಂದಿಗೆ ಮದುವೆ ಮಾಡಲು ನಿರ್ಧರಿಸಿದ್ದರು. ಆದರೆ ತಾಳಿ ಕಟ್ಟುವ ಹೊತ್ತಲ್ಲೇ ಕುಸಿದುಬಿದ್ದಂತೆ ನಾಟಕವಾಡಿ ಬಳಿಕ ಮದುವೆಯನ್ನೇ ಮುರಿದಿದ್ದಾಳೆ. ವರನ ಕಡೆಯವರೆ ಮದುವೆಗಾಗಿ ಲಕ್ಷಾಂತರ ರೂ. ಖರ್ಚುಮಾಡಿದ್ದು, ಕೊನೇ ಕ್ಷಣದಲ್ಲಿ ಮದುಮಗಳ ನಿರ್ಧಾರ ಕೇಳಿ ವರನ ಕಡೆಯವರು ಕಕ್ಕಾಬಿಕ್ಕಿಯಾಗಿದ್ದಾರೆ. ವಧುವಿಗೆ ಛೀಮಾರಿ ಹಾಕಿದ್ದಲ್ಲದೆ, ಖರ್ಚು ಮಾಡಿರುವ ಹಣವನ್ನು ಹಿಂತಿರುಗಿಸುವಂತೆ ಒತ್ತಾಯಿಸಿದ್ದಾರೆ. ಸದ್ಯ ಮದುಮಗಳನ್ನು ಕೆ.ಆರ್.ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.