Saturday, November 26, 2022

ಅನೈತಿಕ ಸಂಬಂಧ: ವಿಷ ಸೇವಿಸಿದ ಜೋಡಿ, ಪ್ರಿಯಕರನ ಮಡಿಲಲ್ಲೇ ಪ್ರಾಣಬಿಟ್ಟ ಪ್ರೇಯಸಿ

Follow Us

newsics.com

ವಿಜಯಪುರ: ಇಬ್ಬರದೂ ವಿವಾಹೇತರ ಅಕ್ರಮ ಸಂಬಂಧ. ತಮ್ಮ ಪ್ರೀತಿಗೆ ಮೂಲ ಸಂಬಂಧಗಳು ಅಡ್ಡಿಯಾಗುತ್ತಿವೆ ಎಂದು ಇಬ್ಬರೂ ವಿಷ ಕುಡಿದರು. ಪ್ತಿಯಕರನ ಮಡಿಲಲ್ಲೇ ಪ್ರೇಯಸಿ ವಿಲವಿಲ ಒದ್ದಾಡಿ ಪ್ರಾಣಬಿಟ್ಟಳು.

ಚೀರಾಟ ಕೇಳಿ ಸ್ಥಳಕ್ಕೆ ಬಂದ ಕುರಿಗಾಹಿಗಳು ಆಸ್ಪತ್ರೆಗೆ ಸೇರಿಸೋಣವೆಂದರೂ‌ ಕೇಳದ ಪ್ರಿಯಕರ ‘ನಾವಿಬ್ಬರೂ ಇಲ್ಲೇ ಸಾಯುತ್ತೇವೆ’ ಎನ್ನುತ್ತಾ ಒದ್ದಾಡುತ್ತಿದ್ದ ಪ್ರೇಯಸಿಯ ಕೆನ್ನೆ ಸವರುತ್ತ ಸಾಂತ್ವನ ಹೇಳುತ್ತಿದ್ದ ದೃಶ್ಯ ಹೃದಯವಿದ್ರಾವಕವಾಗಿತ್ತು. ಕುಡಿದ ಅಮಲಿನಲ್ಲಿ ಕಡಿಮೆ ವಿಷ ಕುಡಿದಿದ್ದ ಪ್ರಿಯಕರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದಲ್ಲಿ ಮಂಗಳವಾರ ಈ ದುರ್ಘಟನೆ ನಡೆದಿದೆ.

ಗಂಗೂರು ಗ್ರಾಮದ ಅಶೋಕ ಎಂಬುವರ ಪತ್ನಿ ರೇಣುಕಾ ಝಳಕಿ(36) ಮೃತ ದುರ್ದೈವಿ. ಅಶೋಕ ಮತ್ತು ರೇಣುಕಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಗಂಡ ಕೆಲಸದ ಮೇಲೆ ಕೇರಳಕ್ಕೆ ಹೋಗಿದ್ದ. ಈ ವೇಳೆ ಹಡಲಗೇರಿ ಗ್ರಾಮದ ಬಸವರಾಜ್ ಕಿಲಾರಹಟ್ಟಿ ಜತೆ ಸಲುಗೆ ಬೆಳೆಸಿಕೊಂಡಿದ್ದ ರೇಣುಕಾ, ಅಕ್ರಮ ಸಂಬಂಧ ಹೊಂದಿದ್ದಳು, ಬಸವರಾಜ್ ಗೂ ಬೇರೊಬ್ಬಳೊಂದಿಗೆ ಮದುವೆ ಆಗಿ 6 ಮಕ್ಕಳಿವೆ.
ಬೇರೆ ಬೇರೆ ಮದುವೆಯಾಗಿದ್ದರೂ ಅನೈತಿಕ‌ ಸಂಬಂಧ ಹೊಂದಿದ್ದ ಜೋಡಿ ಮಂಗಳವಾರ ಬಿದಕುಂದಿ ಗ್ರಾಮದ ಹೊರವಲಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ವಿಷ ಸೇವಿಸಿತ್ತು. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳಾ ಲೆಫ್ಟಿನೆಂಟ್‌: ವಾಯುಸೇನೆ ಅಧಿಕಾರಿಯಿಂದ ವರದಕ್ಷಿಣೆ ಕಿರುಕುಳ ಆರೋಪ

ಮತ್ತೆ ದುಬಾರಿಯಾಯ್ತು ಚಿನ್ನ

ಮತ್ತಷ್ಟು ಸುದ್ದಿಗಳು

vertical

Latest News

ಕಣ್ಣು ತೆರೆದ ಶಿವಲಿಂಗ- ವಿಸ್ಮಯ ನೋಡಲು ಮುಗಿಬಿದ್ದ ಜನ

newsics.com ರಾಮನಗರ: ಬಸವೇಶ್ವರ ಹಾಗೂ ಉಮಾ ಮಹೇಶ್ವರಿ ದೇಗುಲದಲ್ಲಿನ ಶಿವಲಿಂಗ ಕಣ್ಣು ತೆರೆದಿದೆ ಎಂಬ ವದಂತಿ ಹಬ್ಬಿದೆ. ಈ ವದಂತಿ ಹಿನ್ನೆಲೆ ಮಾಗಡಿ ಪಟ್ಟಣದ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದ...

ಚರ್ಮ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ: ನಗ್ನರಾಗಿ ಪೋಸ್ ನೀಡಿದ 2500 ಮಂದಿ

newsics.com ಸಿಡ್ನಿ: ಹೆಚ್ಚುತ್ತಿರುವ ಚರ್ಮ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಫೋಟೋ ಶೂಟ್ ಗೆ 2500 ಮಂದಿ ನಗ್ನರಾಗಿ ಪೋಸ್ ನೀಡಿದ್ದಾರೆ. ಸಿಡ್ನಿಯ ಬೋಂಡಿ ಬೀಚ್ ನಲ್ಲಿ ಈ ಫೋಟೋ ಶೂಟ್...

ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ದುರಂತ: ನಾಲ್ವರು ಯುವತಿಯರ ಸಾವು

newsics.com ಬೆಳಗಾವಿ: ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿ ಇರುವ ಕಿತವಾಡ ಜಲಪಾತದ ಬಳಿ ಭಾರೀ ದುರಂತ ಸಂಭವಿಸಿದೆ. ಸೆಲ್ಫಿ ತೆಗೆಯುವ ವೇಳೆ ನಾಲ್ವರು ಯುವತಿಯರು ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಓರ್ವ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ....
- Advertisement -
error: Content is protected !!