newsics.com
ಬೆಂಗಳೂರು: ಬಿಜೆಪಿ ಸಚಿವರ ಮಧ್ಯೆ ಉಸ್ತುವಾರಿ ಪೈಪೋಟಿ ಏರ್ಪಟ್ಟಿದೆ. ಬೆಂಗಳೂರು ನಗರ ಉಸ್ತುವಾರಿ ಪಟ್ಟಕ್ಕೆ ಸಚಿವ ಸೋಮಣ್ಣ ಮತ್ತು ಅಶೋಕ್ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿದೆ.
ಬೆಂಗಳೂರು ನಗರ ಉಸ್ತುವಾರಿಯನ್ನು ಇಬ್ಬರಿಗೆ ನೀಡಲಿ. ಅರ್ಧ ನನಗೆ ಮತ್ತು ಅರ್ಧ ಭಾಗ ಅಶೋಕ್ ಅವರಿಗೆ ನೀಡಲಿ ಎಂದು ಸೋಮಣ್ಣ ಸಲಹೆ ನೀಡಿದ್ದಾರೆ.
ನಾನು ಸಚಿವನಾಗಿದ್ದಾಗ ಅಶೋಕ್ ಅವರು ಶಾಸಕ ಕೂಡ ಆಗಿರಲಿಲ್ಲ. ಅಶೋಕ್ ಅವರು ಸಾಮ್ರಾಟ್ ನಂತೆ ವರ್ತಿಸುತ್ತಿದ್ದಾರೆ ಎಂದು ಸಚಿವ ಸೋಮಣ್ಣ ಹೇಳಿದ್ದಾರೆ.