ಬೆಂಗಳೂರು: ಪ್ರತಿ ವರ್ಷ 30 ಲಕ್ಷ ಪ್ರವಾಸಿಗರು ಭೇಟಿ ನೀಡುವ ಊಟಿಯಲ್ಲಿ ಕರ್ನಾಟಕ ಸರ್ಕಾರ ಚೇಸಿಂಗ್ ಫೌಂಟೇನ್, ಟೀ ಗಾರ್ಡನ್, ತೂಗು ಸೇತುವೆ ಮತ್ತಿತರ ಆಕರ್ಷಣೆಗಳನ್ನು ಸೃಷ್ಟಿಸುತ್ತಿದೆ.
ಊಟಿಯ ಕರ್ನಾಟಕ ಸಿರಿ ತೋಟಗಾರಿಕಾ ಉದ್ಯಾನಕ್ಕೆ ಶೀಘ್ರದಲ್ಲೆ 1.4 ಕೋಟಿ ರೂ. ವೆಚ್ಚದಲ್ಲಿ ಬೃಹತ್ ತೂಗುಸೇತುವೆ ನಿರ್ಮಾಣವಾಗಲಿದೆ. ಉದ್ಯಾನದಲ್ಲಿ ತೋಟಗಾರಿಕೆ ಇಲಾಖೆಯಿಂದ ನೀಲಗಿರಿ ಕುರಿಗಳನ್ನು ಸಾಕಣೆ ಮಾಡಲಾಗುತ್ತಿದೆ. ಈ ಕುರಿಗಳನ್ನು ಪ್ರವಾಸಿಗರು ನೋಡಬಹುದು.
ಫರ್ನ್ ಹಿಲ್ ನ ಕರ್ನಾಟಕ ಸಿರಿ ತೊಟಗಾರಿಕೆ ಉದ್ಯಾನವನ್ನು ಐದು ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. 1.5 ಕೋಟಿ ರೂ. ವೆಚ್ಚದಲ್ಲಿ ಚೇಸಿಂಗ್ ಫೌಂಟೇನ್ ನಿರ್ಮಾಣವಾಗಲಿದೆ. ಮೂರು ಎಕರೆ ಪ್ರದೇಶದಲ್ಲಿ ಟೀ ಗಾರ್ಡನ್ ಮಾಡಲಾಗುತ್ತಿದೆ. ಈ ಗಾರ್ಡನ್ ನಲ್ಲಿ ಪ್ರವಾಸಿಗರು ಫೋಟೊ ಶೂಟ್ ಮಾಡಬಹುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಊಟಿಯಲ್ಲಿ ಮತ್ತಷ್ಟು ಆಕರ್ಷಣೆ
Follow Us