newsics.com
ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 1,431 ಜನರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, 21 ಸೋಂಕಿತರು ಸಾವನ್ನಪ್ಪಿದ್ದಾರೆ. ರಾಜ್ಯ ಆರೋಗ್ಯ ಇಲಾಖೆಯ ಕೊರೋನಾ ಹೆಲ್ತ್ ಬುಲೆಟಿನ್ ಈ ಮಾಹಿತಿ ನೀಡಿದೆ.
ಬಾಗಲಕೋಟೆ 02, ಬಳ್ಳಾರಿ 05, ಬೀದರ್ 03, ಚಿಕ್ಕಬಳ್ಳಾಪುರ 05, ದಾವಣಗೆರೆ 03, ಗದಗ 04, ಹಾವೇರಿ ಮತ್ತು ಕಲಬುರ್ಗಿ 03, ಕೊಪ್ಪಳ 01, ರಾಯಚೂರು 04, ರಾಮನಗರ 06, ವಿಜಯಪುರ 01 ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಶೂನ್ಯ ಪ್ರಕರಣಗಳು ವರದಿಯಾಗಿವೆ
ಬೆಂಗಳೂರು ನಗರ 305, ದಕ್ಷಿಣ ಕನ್ನಡ 311, ಹಾಸನ 87, ಕೊಡಗು – 82, ಮೈಸೂರು – 83 ಮತ್ತು ಉಡುಪಿ ಜಿಲ್ಲೆಯಲ್ಲಿ 177 ಸೇರಿದಂತೆ ಹೆಚ್ಚಿನ ಪ್ರಕರಣಗಳು ದೃಢಪಟ್ಟಿವೆ. ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 29,29,464ಕ್ಕೆ ಏರಿಕೆಯಾಗಿದೆ. ಇಂದು 1,611 ಮಂದಿ ಗುಣಮುಖರಾಗಿದ್ದು, ಈವರೆಗೆ 28,69,962 ಸೋಂಕಿತರು ಗುಣಮುಖರಾಗಿದ್ದಾರೆ. ಬೆಂಗಳೂರು ನಗರದಲ್ಲಿ 8,166 ಸೇರಿದಂತೆ ರಾಜ್ಯದಲ್ಲಿ 22,497 ಸಕ್ರಿಯ ಸೋಂಕಿತರಿದ್ದಾರೆ.
ಬೆಂಗಳೂರು ನಗರದಲ್ಲಿ ಮೂವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಲ್ವರು ಸೇರಿದಂತೆ ರಾಜ್ಯಾದ್ಯಂತ 21 ಸೋಂಕಿತರು ಸಾವನ್ನಪ್ಪಿದ್ದಾರೆ. ಇದರಿಂದಾಗಿ ಸಾವಿನ ಸಂಖ್ಯೆ 36,979ಕ್ಕೆ ಏರಿಕೆಯಾಗಿದೆ.
ದೂರದೃಷ್ಟಿ ಇಲ್ಲದ ಭಾರತದ ಅಪ್ಘಾನ್ ನೀತಿ, ನೀರಿನಲ್ಲಿ ಕೊಚ್ಚಿ ಹೋದ ಕೋಟಿಗಟ್ಟಲೆ ಹಣ