newsics.com
ಬೆಂಗಳೂರು: ದೇಶದ ಹಲವೆಡೆಗಳಂತೆ ಬೆಂಗಳೂರಲ್ಲೂ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚುತ್ತಿವೆ.
ಮಹಾರಾಷ್ಟ್ರದ ಬಳಿಕ ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಒಂದೇ ಅಪಾರ್ಟ್ಮೆಂಟ್ನಲ್ಲಿ 10 ಜನರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದರಿಂದ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ ಅನ್ನೇ ಸೀಲ್ಡೌನ್ ಮಾಡಲಾಗಿದೆ.
ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಅಪಾರ್ಟ್ಮೆಂಟ್ನಲ್ಲಿ 113 ಜನರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಬೆಳ್ಳಂದೂರಿನ ಅಂಬಲಿಪುರದಲ್ಲಿರುವ ಮತ್ತೊಂದು ಅಪಾರ್ಟ್ಮೆಂಟ್ನಲ್ಲಿ 10 ಜನರಿಗೆ ಕೊರೋನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಬೆಳ್ಳಂದೂರು ಅಪಾರ್ಟ್ಮೆಂಟ್ ಅನ್ನು ಸೀಲ್ಡೌನ್ ಮಾಡಿದ್ದಾರೆ.
ಬೆಳ್ಳಂದೂರು ವಾರ್ಡ್ನ ಅಂಬಲಿಪುರದ ಎಸ್ಜೆಆರ್ ವಾಟರ್ಮಾರ್ಕ್ ಅಪಾರ್ಟ್ಮೆಂಟ್ನಲ್ಲಿ ಫೆ.15ರಂದು ಓರ್ವ ವ್ಯಕ್ತಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಅದಾದ ಬಳಿಕ ಇದುವರೆಗೂ ಆ ಪಾರ್ಟ್ಮೆಂಟ್ನ 10 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಫೆ.15ರಿಂದ 22ರೊಳಗೆ ಅಪಾರ್ಟ್ಮೆಂಟ್ನ 10 ಜನರಿಗೆ ಕೊರೋನಾ ಸೋಂಕು ತಗುಲಿದೆ. ಈ ಅಪಾರ್ಟ್ಮೆಂಟ್ನ 9 ಬ್ಲಾಕ್ಗಳನ್ನು ಕಂಟೇನ್ಮೆಂಟ್ ಜೋನ್ಗಳೆಂದು ಘೋಷಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಬೆಳ್ಳಂದೂರಿನ ಈ ಅಪಾರ್ಟ್ಮೆಂಟ್ನಲ್ಲಿ ಒಟ್ಟು 1,500 ಜನರು ವಾಸವಾಗಿದ್ದು, ಈಗಾಗಲೇ 500 ಜನರನ್ನು ಪರೀಕ್ಷೆ ಮಾಡಲಾಗಿದೆ. ಪ್ರಸ್ತುತ ಸೋಂಕು ದೃಢಪಟ್ಟಿರುವ 10 ಮಂದಿಯಲ್ಲಿ ಐವರು 60 ವರ್ಷ ಮೇಲ್ಪಟ್ಟವರಾಗಿದ್ದಾರೆ. ಕೇರಳಕ್ಕೆ ಪ್ರವಾಸ ಹೋಗಿ ಬಂದ ವ್ಯಕ್ತಿಯೊಬ್ಬರಿಂದ ಅಪಾರ್ಟ್ಮೆಂಟ್ನಲ್ಲಿ ಸೋಂಕು ಹರಡಿದೆ ಎನ್ನಲಾಗಿದೆ.
ಸಿಪಿಐ(ಎಂ) ಹಿರಿಯ ನಾಯಕ ರಾಘವನ್ ಕೊರೋನಾಗೆ ಬಲಿ
ಬೆಂಗಳೂರು ಹಿಂಸಾಚಾರ: ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಕೆ
14 ವರ್ಷದ ಬಾಲಕಿಯನ್ನು ಮದುವೆಯಾದ ಪಾಕ್ ಸಂಸತ್ ಸದಸ್ಯ
ನಟ ಜಗ್ಗೇಶ್ ಮನೆಗೆ ಪೊಲೀಸರ ಭದ್ರತೆ
ಒಂದೇ ದಿನ 10584 ಮಂದಿಗೆ ಕೊರೋನಾ ಸೋಂಕು 78ಜನರ ಸಾವು
ಫೆ.25ಕ್ಕೆ ರೈತರಿಂದ ವಿಧಾನಸೌಧ ಚಲೋ