ಮೈಸೂರು: ಮಾಜಿ ಸಿಎಂ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಕಚೇರಿಯನ್ನು ಮಂಗಳವಾರದಿಂದ 3 ದಿನಗಳವರೆಗೆ ಸೀಲ್ಡೌನ್ ಮಾಡಲಾಗಿದೆ.
ಜತೆಗೆ ಸಿದ್ದರಾಮಯ್ಯ ಅವರ ಮೈಸೂರಿನ ಮನೆಯನ್ನೂ ಸೀಲ್ ಡೌನ್ ಮಾಡಲಾಗಿದೆ. ಸಿದ್ದರಾಮಯ್ಯ ಅವರ ನಿಕಟ ಸಂಪರ್ಕಕ್ಕೆ ಬಂದವರಿಗೆ ಪರೀಕ್ಷೆಗೆ ಒಳಗಾಗಲು ಸೂಚಿಸಲಾಗಿದೆ.
ಮೈಸೂರು ಸೇರಿ ದೇಶದ 17 ಕಡೆ 1600 ಮಂದಿ ಮೇಲೆ ಆಕ್ಸ್ಫರ್ಡ್ ವಿವಿ ಲಸಿಕೆ ಪ್ರಯೋಗ
ಸಿದ್ದರಾಮಯ್ಯ ಅವರು ಜುಲೈ 30ರಂದು ಜಿಲ್ಲಾ ಪತ್ರಕರ್ತರ ಸಂಘದ ಕಚೇರಿಯಲ್ಲಿ ಮಾಧ್ಯಮ ಸಂವಾದ ನಡೆಸಿದ್ದರು. ಈ ಸಂವಾದದಲ್ಲಿ ಭಾಗಿಯಾಗಿದ್ದ ಪತ್ರಕರ್ತರಲ್ಲಿ ಆತಂಕ ಆರಂಭವಾಗಿದೆ. ಹೀಗಾಗಿ ಈ ಮಾಧ್ಯಮ ಸಂವಾದದಲ್ಲಿ ಭಾಗಿಯಾಗಿದ್ದ ಎಲ್ಲ ಪತ್ರಕರ್ತರ ಗಂಟಲುದ್ರವವನ್ನು ನಾಳೆ (ಆ.5) ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ. ಸಂಘದಲ್ಲಿ ಪೂರ್ವನಿಗದಿಯಾಗಿದ್ದ ಎಲ್ಲ ಸುದ್ದಿಗೋಷ್ಠಿಗಳನ್ನು ರದ್ದುಪಡಿಸಲಾಗಿದೆ.