ಬೆಂಗಳೂರು: ಬೆಂಗಳೂರಿನಲ್ಲಿ 107 ಕೊರೋನಾ ಪ್ರಕರಣ ಸೇರಿ ಮಂಗಳವಾರ ಹೊಸದಾಗಿ 322 ಮಂದಿಗೆ ಸೋಂಕು ತಗುಲಿದೆ.
ರಾಜ್ಯದಲ್ಲಿ ಕೊರೋನಾಗೆ ಮಂಗಳವಾರ 8 ಮಂದಿ ಬಲಿಯಾಗಿದ್ದು ಈ ಮೂಲಕ ಸಾವಿನ ಸಂಖ್ಯೆ 150ಕ್ಕೆ ಏರಿಕೆಯಾಗಿದೆ.
ಒಟ್ಟೂ ಸೋಂಕಿತರ ಸಂಖ್ಯೆ 9,721ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 6,004 ಮಂದಿ ಗುಣಮುಖರಾಗಿದ್ದು ಡಿಸ್ಚಾರ್ಜ್ ಆಗಿದ್ದಾರೆ. 3,563 ಕೊರೋನಾ ಸೋಂಕಿತರ ರಾಜ್ಯದ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಳ್ಳಾರಿ (53), ಬೀದರ್ (22), ಮೈಸೂರು (21), ವಿಜಯಪುರ (16), ಯಾದಗಿರಿ (13) ಹಾಗೂ ಉಡುಪಿ (11) ಜಿಲ್ಲೆಗಳಲ್ಲಿ ಅತೀ ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದಾರೆ. ಗದಗ 9, ದಕ್ಷಿಣಕನ್ನಡ, ಕೋಲಾರ ತಲಾ 8, ಹಾಸನ 7, ಕಲಬುರಗಿ 6, ಚಿಕ್ಕಬಳ್ಳಾಪುರ, ಶಿವಮೊಗ್ಗ ತಲಾ 5 ಮಂದಿಗೆ ಸೋಂಕು ತಗುಲಿದೆ. ಧಾರವಾಡ, ತುಮಕೂರು, ಕೊಪ್ಪಳ, ಚಾಮರಾಜನಗರ ತಲಾ 4, ರಾಯಚೂರು, ಉತ್ತರಕನ್ನಡ ತಲಾ 3, ಬೆಳಗಾವಿ, ಮಂಡ್ಯ, ದಾವಣಗೆರೆ, ಹಾವೇರಿ ತಲಾ 2, ಕೊಡಗು ಜಿಲ್ಲೆಯಲ್ಲಿ ಒಬ್ಬರಿಗೆ ಸೋಂಕು ತಗುಲಿದೆ.