newsics.com
ಬೆಂಗಳೂರು: 2021ನೇ ಸಾಲಿನ ಯಂಗ್ ವೈಲ್ಡ್ ಲೈಫ್ ಫೋಟೋಗ್ರಾಫರ್ ಪ್ರಶಸ್ತಿಗೆ ಬೆಂಗಳೂರಿನ ಬಾಲಕ ಭಾಜನನಾಗಿದ್ದಾನೆ. 10 ವರ್ಷದ ವಿದ್ಯುನ್ ಆರ್. ಹೆಬ್ಬಾರ್ ಎಂಬ ಬಾಲಕ ಈ ಪ್ರಶಸ್ತಿ ಪಡೆದಿದ್ದಾನೆ.
ಲಂಡನ್ ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ವತಿಯಿಂದ ಆಯೋಜಿಸಲಾಗಿದ್ದ ಈ ಸ್ಪರ್ಧೆಯಲ್ಲಿ ಪ್ರಪಂಚದ ಹಲವೆಡೆಗಳಿಂದ 50 ಸಾವಿರಕ್ಕೂ ಅಧಿಕ ಸ್ಪರ್ಧಿಗಳು ಭಾಗಿಯಾಗಿದ್ದರು.
ಬಲೆಯಲ್ಲಿರುವ ಜೇಡರ ಹುಳುವಿನ ಫೋಟೋವನ್ನು ವಿದ್ಯುನ್ ಕ್ಲಿಕ್ಕಿಸಿದ್ದು, ಇದಕ್ಕೆ ಅಂತರಾಷ್ಟ್ರೀಯ ಮನ್ನಣೆ ದೊರಕಿದೆ. ಜೇಡರ ಬಲೆ ಅಲುಗಾಡುತ್ತಲೇ ಇತ್ತು. ಹೀಗಾಗಿ ನನಗೆ ಈ ಫೋಟೋ ಕ್ಲಿಕ್ಕಿಸುವುದು ದೊಡ್ಡ ಚಾಲೆಂಜ್ ಆಗಿತ್ತು ಎಂದು ವಿದ್ಯುನ್ ಹೇಳಿದ್ದಾನೆ.