ಬೆಂಗಳೂರು: ಪತ್ನಿ ತನ್ನ ಮಕ್ಕಳನ್ನು ನೋಡಲು ಬಿಡುತ್ತಿಲ್ಲ ಎಂದು ಆರೋಪಿಸಿ ಆಕೆಯ ಮನೆ ಎದುರು ಭಾನುವಾರ ಅಹೋರಾತ್ರಿ ಧರಣಿ ಕುಳಿತಿದ್ದ ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ಅವರನ್ನು ಡಿಸಿಪಿ ಭೀಮಶಂಕರ್ ಮನವೊಲಿಸಿ ರಾತ್ರಿ ತನ್ನ ಮನೆಗೆ ಕರೆದೊಯ್ದು ಬೆಳಗ್ಗೆ ಮಕ್ಕಳನ್ನು ನೋಡಲು ವ್ಯವಸ್ಥೆ ಮಾಡಿದರು. ಇದರಿಂದ ಅರುಣ್ ತನ್ನ ಧರಣಿ ಕೈಬಿಟ್ಟು ತನ್ನ ಕರ್ತವ್ಯದ ಸ್ಥಳಕ್ಕೆ ತೆರಳಿದರು.
ಕಲ್ಬುರ್ಗಿಯಿಂದ ಬಂದಿದ್ದ ಅರುಣ್ ರಂಗರಾಜನ್ ಅವರಿಗೆ ಪತ್ನಿ ಇಲಕಿಯಾ ಕರುಣಾಕರನ್ ಅವರು ಮನೆಬಾಗಿಲು ತೆಗೆಯದೆ ಮಕ್ಕಳನ್ನು ನೋಡಲು ಅವಕಾಶ ನೀಡಿರಲಿಲ್ಲ. ಇದರಿಂದ ಬೇಸತ್ತ ಎಸ್‌ಪಿ ಅರುಣ್ ರಂಗರಾಜನ್ ಅವರು ಪತ್ನಿಯ ಮನೆ ಮುಂದೆಯೇ ಆಹೋರಾತ್ರಿ ಧರಣಿ ನಡೆಸಿದ್ದರು.
ಪ್ರೀತಿಸಿ ವಿವಾಹವಾಗಿದ್ದ ಈ ಜೋಡಿ ನಂತರ ವಿಚ್ಛೇದನ ಪಡೆದುಕೊಂಡಿದ್ದರು.
ಮಗುವಿನ ಭೇಟಿಗೆ ಅವಕಾಶ: ಧರಣಿ ಕೈಬಿಟ್ಟ ಐಪಿಎಸ್ ಅಧಿಕಾರಿ
Follow Us