newsics.com
ಶಿಕಾರಿಪುರ(ಶಿವಮೊಗ್ಗ): ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯನ್ನು ರಾಜಕೀಯಕ್ಕೆ ಲಿಂಕ್ ಮಾಡುವುದಿಲ್ಲ. ಚುನಾವಣೆ ಬೇರೆ ಐಟಿ ದಾಳಿ ಬೇರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಆಪ್ತ ಉಮೇಶ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಕುರಿತಂತೆ ಗುರುವಾರ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಉಮೇಶ್ ನನ್ನ ಜತೆ ಕೆಲಸ ಮಾಡಿದ್ದರು. ವಾಸ್ತವ ಸಂಗತಿ ನಾಳೆ ಬಹಿರಂಗಗೊಳ್ಳುತ್ತದೆ. ನಂತರ ನಾನು ಪ್ರತಿಕ್ರಿಯೆ ನೀಡುತ್ತೇನೆ. ಐಟಿ ದಾಳಿಗಳು ಸಾಮಾನ್ಯವಾಗಿ ನಡೆಯುತ್ತದೆ. ಅದೇ ರೀತಿ ಉಮೇಶ್ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದರು.
ಜಾಮೂನ್ ಜತೆ ಸತ್ತ ಜಿರಳೆ ನೀಡಿದ್ದ ಬೆಂಗಳೂರಿನ ಹೋಟೆಲ್: 55 ಸಾವಿರ ರೂ. ಪಾವತಿಗೆ ಕೋರ್ಟ್ ಸೂಚನೆ