Monday, June 14, 2021

ಬೆಂಗಳೂರಿನಲ್ಲಿ ಕೊರೋನಾಕ್ಕೆ ಒಂದೇ ದಿನ ಮೂವರು ಪೌರ ಕಾರ್ಮಿಕರ ಬಲಿ

ಬೆಂಗಳೂರು:  ಮಾರಕ ಕೊರೋನಾ ಬೆಂಗಳೂರಿನಲ್ಲಿ ಮೂವರು ಪೌರ ಕಾರ್ಮಿಕರನ್ನು ಬಲಿಪಡೆದಿದೆ ಎಂದು ವರದಿಯಾಗಿದೆ. ಆದರೆ ಇದುವರೆಗೆ ಒಬ್ಬರು ಮಾತ್ರ ಬಲಿಯಾಗಿದ್ದಾರೆ ಎಂದು ಬಿಬಿಎಂಪಿ ಮೂಲಗಳು  ಹೇಳಿವೆ. ದೀಪಾಂಜಲಿ ನಗರ, ನಾಗೇನ ಹಳ್ಳಿ ಮತ್ತು ಕೆ ಆರ್ ಮಾರ್ಕೇಟ್ ಪರಿಸರದಲ್ಲಿ ಕೆಲಸ ಮಾಡುತ್ತಿದ್ದ  ಪೌರ ಕಾರ್ಮಿಕರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ. ಬಿಬಿಎಂಪಿ ಇತರ ಇಬ್ಬರು ಪೌರ ಕಾರ್ಮಿಕರು ಮೃತಪಟ್ಟಿರುವುದನ್ನು ಇದುವರೆಗೆ ದೃಢೀಕರಿಸಿಲ್ಲ,

ಖಾಸಗಿ ಆಸ್ಪತ್ರೆಗಳು ಸಕಾಲದಲ್ಲಿ ಚಿಕಿತ್ಸೆ ನೀಡದೆ ಸತಾಯಿಸಿದ್ದೇ  ಈ ಪೌರ ಕಾರ್ಮಿಕರ ಸಾವಿಗೆ ಕಾರಣ ಎಂಬ ಆರೋಪ ಕೂಡ ಕೇಳಿ ಬಂದಿದೆ. ಈ ಮಧ್ಯೆ ಬೆಂಗಳೂರು ದಕ್ಷಿಣ ವಲಯದಲ್ಲಿ ಡ್ರೋಣ್ ಮೂಲಕ ಸ್ಯಾನಿಟೈಸ್ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಪ್ರಾಯೋಗಿಕವಾಗಿ ಬಿಬಿಎಂಪಿ ಈ ಪರೀಕ್ಷೆಗೆ ಮುಂದಾಗಿದೆ. 50 ಅಡಿ ಎತ್ತರದಲ್ಲಿ ಹಾರಾಡಲಿರುವ ಡ್ರೋಣ್, 1.5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಒಮ್ಮೆ  ಸ್ಯಾನಿಟೈಸ್ ಮಾಡಲು ಶಕ್ತವಾಗಿದೆ.

ಇದೇ ವೇಳೆ ಬೆಂಗಳೂರಿನ ಕೆಲವೆಡೆ ಲಾಕ್ ಡೌನ್ ನಿರ್ಬಂಧ ಕಟ್ಟು ನಿಟ್ಟಾಗಿ ಜಾರಿಯಾಗಿಲ್ಲ ಎಂಬ ಆರೋಪ ಕೂಡ ಕೇಳಿ ಬಂದಿದೆ.

ಮತ್ತಷ್ಟು ಸುದ್ದಿಗಳು

Latest News

ಮಮತಾ ಬ್ಯಾನರ್ಜಿ ಯನ್ನು ಮದುವೆಯಾದ ಸೋಶಿಯಲಿಸಂ

newsics.com ಸೇಲಂ: ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಮಮತಾ ಬ್ಯಾನರ್ಜಿ ಮದುವೆ ನೆರವೇರಿದೆ. ವರನ ಹೆಸರು ಸೋಶಿಯಲಿಸಂ. ವರನ ತಂದೆ ಎಡಪಕ್ಷಗಳ ಅಭಿಮಾನಿ. ಹೀಗಾಗಿ ತಮ್ಮ ಮಗನಿಗೆ ಸೋಶಿಯಲಿಸಂ...

ಚೇತರಿಕೆ ಕಾಣದ ಸಂಚಾರಿ ವಿಜಯ್ ಆರೋಗ್ಯ ಸ್ಥಿತಿ

newsics.com ಬೆಂಗಳೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ನಟ ಸಂಚಾರಿ ವಿಜಯ್ ಅವರ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗಿಲ್ಲ. ಅವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿ ಮುಂದುವರಿದಿದೆ. ಬನ್ನೇರು ಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ....

ಫ್ರೆಂಚ್ ಓಪನ್ ಟೆನಿಸ್: 19ನೇ ಗ್ರ್ಯಾನ್ ಸ್ಲಾಮ್ ಗೆದ್ದ ನೋವಾಕ್ ಜೊಕೋವಿಚ್

newsics.com ಪ್ಯಾರಿಸ್: ನೋವಾಕ್ ಜೊಕೋವಿಚ್ 19 ನೇ ಗ್ರ್ಯಾನ್ ಸ್ಲಾಮ್ ಗೆದ್ದಿದ್ದಾರೆ. ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯ ಪುರುಷರ ವಿಭಾಗದ ಸಿಂಗಲ್ಸ್‌ನ ಫೈನಲ್ಸ್ ನಲ್ಲಿ ಅಗ್ರ ಶ್ರೇಯಾಂಕ ಆಟಗಾರ ನೋವಾಕ್ ಜೊಕೋವಿಚ್ ತಮ್ಮ ಎದುರಾಳಿ ಸ್ಟೆಫಾನೋಸ್...
- Advertisement -
error: Content is protected !!