Wednesday, May 25, 2022

ನಾಳೆಯೇ ಕರ್ನಾಟಕ ಬಂದ್; ಆಟೋ, ಟ್ಯಾಕ್ಸಿ ಇಲ್ಲ, ಬಸ್ ಓಡೋದೂ ಡೌಟ್

Follow Us

newsics.com
ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ವಿರೋಧಿ ಧೋರಣೆ ವಿರೋಧಿಸಿ ರೈತಪರ ಸಂಘಟನೆಗಳು ಸೆ.28 ರ ಸೋಮವಾರ ‘ಕರ್ನಾಟಕ ಬಂದ್’ಗೆ ಕರೆ ನೀಡಿದ್ದು, ರಾಜ್ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಎಪಿಎಂಸಿ ಹಾಗೂ ಭೂಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ 40 ಕ್ಕೂ ಹೆಚ್ಚು ರೈತಪರ ಸಂಘಟನೆಗಳು ಹಾಗೂ ಕಾರ್ಮಿಕ ಸಂಘಟನೆಗಳು ನಾಳೆಯ ಬಂದ್ ಗೆ ಕರೆನೀಡಿವೆ. ಓಲಾ, ಉಬರ್, ಟ್ಯಾಕ್ಸಿ, ಆಟೋಗಳು ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಂಚರಿಸುವುದಿಲ್ಲ.
ಹಾಲು, ಹಣ್ಣು, ತರಕಾರಿ, ಮೆಡಿಕಲ್ ಸ್ಟೋರ್ಸ್, ಆಸ್ಪತ್ರೆ ಸೇವೆಗಳು ಇರಲಿವೆ. ಹೋಟೆಲ್ ಗಳು, ಬಾರ್ ಮತ್ತು ರೆಸ್ಟೋರೆಂಟ್ ಗಳು, ಎಂದಿನಂತೆ ಓಪನ್ ಇರಲಿದ್ದು, ಕೆಎಸ್‌ಆರ್ ಟಿಸಿ, ಬಿಎಂಟಿಸಿ, ಮೆಟ್ರೋ, ರೈಲು, ವಿಮಾನ ಸಂಚಾರ ಇರಲಿದೆ.
ಓಲಾ-ಉಬರ್, ಆಟೋ-ಟ್ಯಾಕ್ಸಿ ಸಂಘಗಳು ಬಂದ್ ಗೆ ಬೆಂಬಲ ನೀಡಿದ್ದು, ಈ ಸೇವೆಗಳು ಇರುವುದಿಲ್ಲ. ಖಾಸಗಿ ಬಸ್, ಲಾರಿ ಸೇವೆಗಳು ಬಂದ್ ಇರಲಿವೆ ಎನ್ನಲಾಗಿದೆ.
ರೈತರ ಹೋರಾಟಕ್ಕೆ ಬೀದಿ ಬದಿ ವ್ಯಾಪಾರಿಗಳು ಬೆಂಬಲ ನೀಡಿದ್ದು, ಹೀಗಾಗಿ ನಾಳೆ ಮಾರ್ಕೆಟ್ ಬಂದ್ ಆಗುವ ಸಾಧ್ಯತೆ ಇದೆ.
ಕೆಎಸ್’ಆರ್’ಟಿಸಿ ಹಾಗೂ ಬಿಎಂಟಿಸಿ ಸಂಚಾರದಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ, ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಸ್ ವ್ಯವಸ್ಥೆ ಇರಲಿದೆ ಎಂದು ಕೆಎಸ್’ಆರ್’ಟಿಸಿ ಎಂಡಿ ಶಿವಯೋಗಿ ಕಳಸದ್ ಮಾಹಿತಿ ನೀಡಿದ್ದಾರೆ. ಬಿಎಂಟಿಸಿ ಬಸ್ ಸಂಚಾರ ಇರಲಿದೆ ಎಂದು ಬಿಎಂಟಿಸಿ ವಿಭಾಗದ ಮುಖ್ಯ ಸಂಚಾರ ವ್ಯವಸ್ಥಾಪಕ ರಾಜೇಶ್ ಹೇಳಿದ್ದಾರೆ. ಆದರೆ, ಬೆಳಗ್ಗೆಯಿಂದಲೇ ಬಸ್, ರೈಲುಗಳನ್ನು ತಡೆಯುವುದಾಗಿ ಬಂದ್ ಗೆ ಕರೆಕೊಟ್ಟಿರುವ ಸಂಘಟನೆಗಳು ಹೇಳಿವೆ.

ಮತ್ತಷ್ಟು ಸುದ್ದಿಗಳು

Latest News

ಮಳಲಿ ಮಸೀದಿಯಲ್ಲಿ ದೇಗುಲ ಕುರುಹು ಪತ್ತೆ ವಿವಾದ : ತಾಂಬೂಲ ಪ್ರಶ್ನೆಗೆ ಕ್ಷಣಗಣನೆ

newsics.com ಮಂಗಳೂರು ಹೊರವಲಯದಲ್ಲಿರುವ ಗಂಜಿಮಠ ಸಮೀಪದಲ್ಲಿರುವ ಮಳಲಿ ಮಸೀದಿ ನವೀಕರಣ ಕಾರ್ಯದ ವೇಳೆಯಲ್ಲಿ ಹಿಂದೂ ದೇವಾಲಯದ ಕುರುಹುಗಳು ಪತ್ತೆಯಾದ ಸಂಬಂಧ ಇಂದು ಬಜರಂಗದಳ ಹಾಗೂ ವಿಶ್ವ ಹಿಂದೂ...

ಬಿಹಾರ ರಾಜ್ಯಸಭೆಗೆ ಅವಿರೋಧ ಆಯ್ಕೆಯಾದ ಕನ್ನಡಿಗ

newsics.com ಬಿಹಾರ ರಾಜ್ಯಸಭೆಗೆ ಉಡುಪಿ ತಾಲೂಕಿನ ಸಳ್ವಾಡಿ ಮೂಲದ ಅನಿಲ್​ ಹೆಗ್ಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಡಾ. ಮಹೇಂದ್ರ ಪ್ರಸಾದ್​ ನಿಧನದ ಬಳಿಕ ತೆರವಾಗಿದ್ದ ಈ ಸ್ಥಾನಕ್ಕೆ ಅನಿಲ್​ ಹೆಗ್ಡೆ ಹೆಸರನ್ನು ಬಿಹಾರ ಸಿಎಂ ನಿತೀಶ್​ ಕುಮಾರ್...

ನಿರೂಪಕಿಯರು​ ಮುಖ ಮುಚ್ಚಿಕೊಳ್ಳಿ ಎಂದ ತಾಲಿಬಾನ್​ ವಿರುದ್ಧ ಫೇಸ್​ಮಾಸ್ಕ್​ ಅಭಿಯಾನ!

newsics.com ಮಹಿಳಾ ನಿರೂಪಕರಿಗೆ ಕೆಲಸದ ಸ್ಥಳದಲ್ಲಿ ತಮ್ಮ ಮುಖವನ್ನು ಮುಚ್ಚಿಕೊಳ್ಳಬೇಕು ಎಂದು ತಾಲಿಬಾನ್​ ಹೊರಡಿಸಿರುವ ಆದೇಶವನ್ನು ವಿರೋಧಿಸಿರುವ ಅಫ್ಘಾನಿಸ್ತಾನದ ಪುರುಷ ಸುದ್ದಿ ವಾಚಕರು ಸೋಶಿಯಲ್​ ಮೀಡಿಯಾದಲ್ಲಿ ಹೊಸ ಅಭಿಯಾನ ಆರಂಭಿಸಿದ್ದಾರೆ. ಅಭಿಯಾನದ ಭಾಗವಾಗಿ ಪುರುಷ ನಿರೂಪಕರು...
- Advertisement -
error: Content is protected !!