newsics.com
ಬೆಂಗಳೂರು : ವಿಧಾನಪರಿಷತ್ ಚುನಾವಣೆಯಲ್ಲಿ ಹೆಚ್ಚುವರಿ ಅಭ್ಯರ್ಥಿಗಳು ಕಣದಲ್ಲಿರದ ಕಾರಣ ಏಳೂ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಆಯೋಗ ಘೋಷಣೆ ಮಾಡಿದೆ.
ಇದರಿಂದಾಗಿ ಬಿಜೆಪಿ 4 , ಕಾಂಗ್ರೆಸ್ 2 ಹಾಗೂ ಜೆಡಿಎಸ್ 1 ಪರಿಷತ್ ಸ್ಥಾನವನ್ನು ಪಡೆದಂತಾಗಿದೆ.
ಬಿಜೆಪಿಯಿಂದ ಛಲವಾದಿ ನಾರಾಯಣ ಸ್ವಾಮಿ, ಹೇಮಾವತಿ ನಾಯಕ್, ಲಕ್ಷ್ಮಣ ಸವದಿ,ಹಾಗೂ ಕೇಶವ ಪ್ರಸಾದ್ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ನಿಂದ ಕೆ.ಅಬ್ದುಲ್ ಜಬ್ಬಾರ್ ಹಾಗೂ ಎಂ ನಾಗರಾಜು ಆಯ್ಕೆಯಾಗಿದ್ದಾರೆ. ಜೆಡಿಎಸ್ ಟಿ. ಸರವಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮತ್ತೊಬ್ಬ ಬೆಂಗಾಳಿ ನಟಿ ಆತ್ಮಹತ್ಯೆ : ಕಳೆದೊಂದು ತಿಂಗಳಲ್ಲಿ ಮೂರನೇ ಪ್ರಕರಣ