newsics.com
ಬೆಳಗಾವಿ: ರಾಜ್ಯದಲ್ಲಿರುವ ಜಲ ವಿವಾದಗಳನ್ನು ಬಗೆಹರಿಸಲು ರಾಜ್ಯ ಸರ್ಕಾರವು ₹122.76 ಕೋಟಿ ಪಾವತಿಸಲಾಗಿದೆ ಎನ್ನಲಾಗಿದೆ.
‘ಕಾವೇರಿ, ಕೃಷ್ಣಾ ಹಾಗೂ ಮಹದಾಯಿ ನದಿಗಳ ವಿವಾದ ಬಗೆಹರಿಸಲು ರಚಿಸಲಾದ ಕಾವೇರಿ ಜಲವಿವಾದ ನ್ಯಾಯಮಂಡಳಿ, ಕೃಷ್ಣಾ ಜಲವಿವಾದ ನ್ಯಾಯಮಂಡಳಿ ಹಾಗೂ ಮಹದಾಯಿ ಜಲವಿವಾದ ನ್ಯಾಯಮಂಡಳಿ ವಿಚಾರಣೆ ಸಮಯದಲ್ಲಿ ರಾಜ್ಯದ ಪರವಾಗಿ ವಾದ ಮಂಡಿಸಲು ವಕೀಲರ ಶುಲ್ಕಕ್ಕಾಗಿ ರಾಜ್ಯ ಸರ್ಕಾರವು ₹122.76 ಕೋಟಿ ಪಾವತಿಸಿದೆ’ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಕರ್ನಾಟಕ, ತಮಿಳನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳ ನಡುವಣ ಜಲವಿವಾದದ ಇತ್ಯರ್ಥಕ್ಕೆ 1990ರಲ್ಲಿ ಕಾವೇರಿ ಜಲವಿವಾದ ನ್ಯಾಯಮಂಡಳಿ ರಚಿಸಲಾಗಿದೆ. ಪ್ರಾರಂಭದಿಂದ 2017ರ ಜುಲೈ 10ರವರೆಗೆ ಒಟ್ಟು 580 ಸಿಟ್ಟಿಂಗ್‌ಗಳು ನಡೆದಿವೆ. ಈ ಪ್ರಕರಣದಲ್ಲಿ ರಾಜ್ಯದ ಪರವಾಗಿ ವಾದ ಮಂಡಿಸಿದ ವಕೀಲರಿಗೆ ₹54.13 ಕೋಟಿಗೂ ಅಧಿಕ ಶುಲ್ಕ ಪಾವತಿಸಲಾಗಿದೆ’ ಎಂದರು.
ಒಟ್ಟು 41 ಹಿರಿಯ ವಕೀಲರಿಗೆ ಶುಲ್ಕ ಪಾವತಿಸಲಾಗಿದೆ. ಪ್ರಮುಖವಾಗಿ ಅನಿಲ ಬಿ. ದಿವಾನ್ ಅವರಿಗೆ ₹29.78 ಕೋಟಿ ಎಫ್.ಎಸ್.ನಾರಿಮನ್ ಅವರಿಗೆ ₹27.45 ಕೋಟಿ ಎಸ್.ಎಸ್. ಜವಳಿ ಅವರಿಗೆ ₹12.61 ಕೋಟಿ ಮೋಹನ ಕಾತರಕಿ ಅವರಿಗೆ ₹13.39 ಕೋಟಿ ಶುಲ್ಕ ಸಂದಾಯ ಮಾಡಲಾಗಿದೆ ಎಂದು ಅವರು ದಾಖಲೆ ನೀಡಲಾಗಿದೆ.
‘ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಬಳಿಯ ಚಿನ್ನಾಭರಣಗಳನ್ನು ಮಾರಾಟ ಮಾಡಿ ₹10.50 ಕೋಟಿ ವೆಚ್ಚದಲ್ಲಿ ಕೆಆರ್‌ಎಸ್ ಜಲಾಶಯ ನಿರ್ಮಿಸಿದರು. ಆದರೆ ಅದರ ನೀರನ್ನು ಬಳಸಿಕೊಳ್ಳಲು ಸರ್ಕಾರ ಕೋಟ್ಯಂತರ ಹಣವನ್ನು ವಕೀಲರಿಗೆ ನೀಡಿದೆ’ ಎಂದರು.